ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಡೀಸೆಲ್ ದರ 100 ರೂಪಾಯಿ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪ್ರತಿ ಲೀಟರ್ ಡೀಸೆಲ್ ದರವು 100.5 ರೂಪಾಯಿ ಆಗಿದೆ.
ಶನಿವಾರ ಪ್ರತಿ ಲೀಟರ್ ಪೆಟ್ರೋಲ್ಗೆ 27 ಪೈಸೆ ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 23 ಪೈಸೆ ಏರಿಕೆ ಕಂಡಿದೆ.
ಮೇ 4ರ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 5.75 ರೂಪಾಯಿ ಏರಿಕೆ ಕಂಡಿದ್ದರೆ ಡೀಸೆಲ್ ದರ ಪ್ರತಿ ಲೀಟರ್ಗೆ 6.25 ರೂಪಾಯಿ ಏರಿಕೆಯಾದಂತಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.12 ರೂಪಾಯಿ ಆಗಿದ್ದು ಡೀಸೆಲ್ ಪ್ರತಿ ಲೀಟರ್ಗೆ 86.98 ರೂಪಾಯಿಗೆ ಮಾರಾಟವಾಗ್ತಿದೆ. ದೆಹಲಿಯಲ್ಲಿ ನಿಗದಿಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ದರ ಇಡೀ ದೇಶಕ್ಕೆ ಮಾನದಂಡವಾಗಿದ್ದರೂ ಸಹ ಚಿಲ್ಲರೆ ದರದಲ್ಲಿ ಏರಿಳಿತವಾಗಬಹುದು.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿಗಳ ಗಡಿ ಮುಟ್ಟುತ್ತಿದ್ದು 99.33 ರೂಪಾಯಿ ಆಗಿದೆ. ಮುಂಬೈ ಬಳಿಕ ಇಡೀ ದೇಶದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರ ಹೊಂದಿರುವ ನಗರ ಬೆಂಗಳೂರಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ಗೆ 102.3 ರೂಪಾಯಿ ಹಾಗೂ ಡೀಸೆಲ್ ದರ 94.39 ರೂಪಾಯಿ ಆಗಿದೆ.