alex Certify BIG NEWS: ದೇವಾಲಯಗಳ ತೆರವು; ಕೋಟ್ಯಂತರ ಜನರಿಗೆ ನೋವಾಗಿದೆ; ಬೇಸರ ವ್ಯಕ್ತಪಡಿಸಿದ ಸಿ.ಟಿ. ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇವಾಲಯಗಳ ತೆರವು; ಕೋಟ್ಯಂತರ ಜನರಿಗೆ ನೋವಾಗಿದೆ; ಬೇಸರ ವ್ಯಕ್ತಪಡಿಸಿದ ಸಿ.ಟಿ. ರವಿ

ಬೆಂಗಳೂರು: ಪುರಾತನ ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವುಗೊಳಿಸಲಾಗುತ್ತಿರುವುದು ಕೋಟ್ಯಂತರ ಜನರ ಮನಸ್ಸಿಗೆ ನೋವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿ ದೇವಾಲಯ ತೆರವು ಮಾಡುವುದು ಸರಿಯಲ್ಲ. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಿಎಂ ಬೊಮ್ಮಾಯಿ ಜೊತೆಗೂ ಮಾತನಾಡಿದ್ದೇನೆ. ದೇವಾಲಯ ತೆರವಿನಿಂದ ಎಲ್ಲರ ಮನಸ್ಸಿಗೂ ನೋವಾಗಿದೆ ಎಂದರು.

ಸಿನಿಮಾದಿಂದ ಪ್ರೇರಣೆ ಪಡೆದು ದುಷ್ಕರ್ಮಿಗಳಿಂದ ರೈಲಿನಲ್ಲಿ ದರೋಡೆ

ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು ನಿಜ. ಆದೇಶ ಪಾಲನೆ ಹೇಗೆ ಮಾಡಬೇಕು ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ದೇವಾಲಯಗಳ ತೆರವು ವಿಚಾರ ಮತ್ತೊಮ್ಮೆ ಪರಿಶೀಲಿಸಬೇಕು. ಏಕಾಏಕಿ ನಿರ್ಧಾರ ಸರಿಯಲ್ಲ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...