ಬೆಂಗಳೂರು: ದೇವಾಲಯಗಳ ತೆರವು ವಿಚಾರದಲ್ಲಿ ಅಚಾತುರ್ಯ ನಡೆದಿದೆ. ಹಾಗಾಗಿ ದೇವಸ್ಥಾನಗಳ ರಕ್ಷಣೆಗಾಗಿ ಹೊಸ ಮಸೂದೆ ಮಂಡಿಸುವ ಮೂಲಕ ಸರಿಪಡಿಸಲು ಮುಂದಾಗಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ನಾವು ದೇವಾಲಯಗಳನ್ನು ಕಟ್ಟಲು ಬಂದಿದ್ದೇವೆ ಹೊರತು ಕೆಡವಲು ಬಂದಿಲ್ಲ. ದೇವಸ್ಥಾನಗಳ ಸಂರಕ್ಷಣೆಗೆ ಸರ್ಕಾರ ಹೊಸ ಮಸೂದೆ ತಂದಿದೆ. ಸರ್ಕಾರದ ಈ ನೀತಿಯನ್ನು ನಾನು ಸ್ವಾಗತಿಸುತ್ತೇನೆ. ದೇವಾಲಯದ ತೆರವಿನಿಂದ ಭಕ್ತರ ಭಾವನೆಗಳಿಗೆ ನೋವಾಗಿತ್ತು. ಅಚಾತುರ್ಯ ಸರಿಪಡಿಸಲು ಸರ್ಕಾರ ಮುಂದಾಗಿದೆ ಇದು ನಿಜಕ್ಕೂ ಶ್ಲಾಘನೀಯ ಎಂದರು.
BIG NEWS: ಲಾಡ್ಜ್ ನ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ; ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆಗೆ ‘ಬಿಗ್ ಟ್ವಿಸ್ಟ್’
ಆದರೆ ಈಗ ನಾವು ತರುತ್ತಿರುವ ಮಸೂದೆಯನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಹಿಂದೂ ಪರ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಹೊಸ ಮಸೂದೆಯನ್ನು ಸಿದ್ದರಾಮಯ್ಯ ವಿರೋಧಿಸುತ್ತಿದ್ದಾರೆ ಅಂದರೆ ಇವರ ಸೋಗಲಾಡಿತನ ಅರ್ಥವಾಗುತ್ತೆ, ದೇವಾಲಯಗಳ ರಕ್ಷಣೆ ವಿಚಾರದಲ್ಲಿ ಸಿದ್ದರಾಮಯ್ಯನವರ ನಿಜಬಣ್ಣ ಬಯಲಾಗಿದೆ ಎಂದು ಗುಡುಗಿದ್ದಾರೆ.