alex Certify BIG NEWS: ಲಾಡ್ಜ್ ನ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ; ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆಗೆ ‘ಬಿಗ್ ಟ್ವಿಸ್ಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಡ್ಜ್ ನ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ; ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆಗೆ ‘ಬಿಗ್ ಟ್ವಿಸ್ಟ್’

ತುಮಕೂರು: ಇತ್ತೀಚೆಗೆ ತುಮಕೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ರಾಶಿ ರಾಶಿ ಕಾಂಡೋಮ್ ಗಳ ಪತ್ತೆ ಪ್ರಕರಣ ಇದೀಗ ಶಾಕಿಂಗ್ ತಿರುವು ಪಡೆದುಕೊಂಡಿದ್ದು, ಲಾಡ್ಜ್ ಒಂದರ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವೊಂದು ಪೊಲೀಸರಿಗೆ ಸಿಕ್ಕಿಬಿದ್ದಿದೆ.

ರಸ್ತೆಯಲ್ಲಿ ಬಿಸಾಕಿದ್ದ ರಾಶಿ ರಾಶಿ ಕಾಂಡೋಮ್ ಗಳ ಜಾಡು ಹಿಡಿದು ಖಚಿತ ಮಾಹಿತಿ ಆಧಾರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 7 ಜನರನ್ನು ಬಂಧಿಸಿದ್ದಾರೆ.

ಲಾಡ್ಜ್ ನ ರೂಮ್ ಒಂದರ ಮಿರರ್ ಕೆಳಭಾಗದಲ್ಲಿ ಇದ್ದ ಸ್ಟ್ಯಾಂಡ್ ನ್ನು ಒಡೆದಾಗ ಪೊಲೀಸರೇ ಶಾಕ್ ಆಗಿದ್ದು, ಸ್ಟ್ಯಾಂಡ್ ರೂಪದಲ್ಲಿ ಸುರಂಗಮಾರ್ಗವನ್ನೇ ಕೊರೆದಿರುವುದು ಪತ್ತೆಯಾಗಿದೆ. ಲಾಡ್ಜ್ ನ ಸುರಂಗದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಯುವತಿಯರು ಹಾಗೂ ಓರ್ವ ಪುರುಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ಯುವತಿ ಪರಾರಿಯಾಗಿದ್ದಾಳೆ.

ಲಾಡ್ಜ್ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಲಾಡ್ಜ್ ನಲ್ಲಿ ಸುರಂಗ ಕೊರೆದು ಯುವತಿಯರನ್ನು ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಪೊಲೀಸರು ದಾಳಿಗೆ ಮುಂದಾದ ಸಮಯದಲ್ಲಿ ಯುವತಿಯರನ್ನು ಹಾಗೂ ಪುರುಷರನ್ನು ಈ ಸುರಂಗದಲ್ಲಿ ಬಚ್ಚಿಡಲಾಗುತ್ತಿತ್ತು ಎಂಬ ವಿಚಾರ ಬಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...