alex Certify BIG NEWS: ದೇಗುಲ ತೆರವು ವಿಚಾರ; ಕಾಂಗ್ರೆಸ್-ಬಿಜೆಪಿ ಮಾರಾಮಾರಿ; ಕೈ ಕಾರ್ಯಕರ್ತನ ಮೇಲೆ ಮಚ್ಚಿನಿಂದ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಗುಲ ತೆರವು ವಿಚಾರ; ಕಾಂಗ್ರೆಸ್-ಬಿಜೆಪಿ ಮಾರಾಮಾರಿ; ಕೈ ಕಾರ್ಯಕರ್ತನ ಮೇಲೆ ಮಚ್ಚಿನಿಂದ ಹಲ್ಲೆ

ಮೈಸೂರು: ರಾಜ್ಯದಲ್ಲಿ ದೇವಾಲಯಗಳ ತೆರವು ವಿಚಾರ ಇದೀಗ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಾರಾಮಾರಿಗೆ ಕಾರಣವಾಗಿದೆ. ಹುಚ್ಚಗಣಿ ದೇವಾಲಯದ ತೆರವು ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಮಚ್ಚಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.

ನಂಜನಗೂಡಿನ ಹುಚ್ಚಗಣಿ ದೇವಾಲಯ ತೆರವು ವಿಚಾರವಾಗಿ ಸ್ಥಳಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಾಗೂ ಬೆಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಿಜೆಪಿಯ ಕಾರ್ಯಕರ್ತ ಎನ್ನಲಾದ ರವಿ ಎಂಬಾತ ಕಾಂಗ್ರೆಸ್ ಕಾರ್ಯಕರ್ತ ಉದಯರವಿ ಎಂಬುವವರ ಮೇಲೆ ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ, ಗಲಾಟೆ ನಡೆದಿದೆ.

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಘಟನೆಯಿಂದ ಕೋಪಗೊಂಡ ಉದಯರವಿ ಕುಟುಂಬದವರು ರವಿ ಮನೆ ಮೇಲೆ ದಾಳಿ ನಡೆಸಿದ್ದು, ಆತನ ಮೇಲೂ ಹಲ್ಲೆ ನಡೆಸಿದ್ದಾರೆ. ಉದ್ವಿಗ್ನಪರಿಸ್ಥಿತಿ ಉಂಟಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...