ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಸಾಮಗ್ರಿಗಳನ್ನು ಹಿಂದೂಗಳ ಅಂಗಡಿಯಿಂದ ಮಾತ್ರ ಖರೀದಿ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.
ದೀಪಾವಳಿ ಹಬ್ಬಕ್ಕಾಗಿ ಸಾಮಗ್ರಿಗಳನ್ನು ದೀಪ ಹಚ್ಚುವವರ ಅಂಗಡಿಯಲ್ಲಿಯೇ ಖರೀದಿಸಿ. ದೇಶಕ್ಕೆ ಊರಿಗೆ ಬೆಂಕಿ ಹಚ್ಚುವ ಅಂಗಡಿಯಿಂದ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿ ಹೆಚ್ ಪಿ ಪೋಸ್ಟ್ ಪ್ರಕಟಿಸಿದೆ.
ವಿಹೆಚ್ ಪಿ ಅನಗತ್ಯವಾಗಿ ಇಂತಹ ಪೋಸ್ಟ್ ಪ್ರಕಟಿಸಿ ವಿವಾದವನ್ನು ಹುಟ್ಟು ಹಾಕುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.