ಕೈವಾ; ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದು, ಉಕ್ರೇನ್ ರಾಜಧಾನಿ ಕೈವಾ ಸೇರಿದಂತೆ ಪ್ರಮುಖ ನಗರಗಳ ಮೇಲೆ ವಾಯುದಾಳಿ ಆರಂಭಿಸಿದೆ. ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿಗಳು ನಡೆದಿದ್ದು ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಯುದ್ಧ ಘೋಷಣೆ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೇಲೆನ್ಸಿ, ದೇಶದಲ್ಲಿ ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಅಲ್ಲದೇ ರಷ್ಯಾದಲ್ಲಿರುವ ಉಕ್ರೇನ್ ನಾಗರಿಕರು ದೇಶ ತೊರೆಯುವಂತೆಯೂ ಸಲಹೆ ನೀಡಿದ್ದಾರೆ.
ವಿಭಿನ್ನ ‘ಡಿಸೈನ್’ ನಲ್ಲಿ ನಿರ್ಮಾಣವಾಗಿವೆ ಈ ಹೊಟೇಲ್ಸ್
ಇದೊಂದು ಘೋರ ಯುದ್ಧವಾಗುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣಕ್ಕೆ ಯುದ್ಧ ನಿಲ್ಲಿಸಿ ಶಾಂತಿ ಕಾಪಾಡುವುದು ಆದ್ಯತೆಯಾಗಬೇಕು ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.
ರಷ್ಯಾ ಸೇನೆಯ 2 ಲಕ್ಷಕ್ಕೂ ಅಧಿಕ ಯೋಧರು ಉಕ್ರೇನ್ ಗಡಿಯಲ್ಲಿ ಬೀಡುಬಿಟ್ಟಿದ್ದು ದಾಳಿ ನಡೆಸುತ್ತಿದ್ದಾರೆ. ನಮ್ಮ ದೇಶದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಆದರೆ ಯುದ್ಧದ ಪರಿಣಾಮಗಳು ಭಾರಿ ಅನಾಹುತ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿಸಿದ್ದಾರೆ.