alex Certify ವಿಭಿನ್ನ ‘ಡಿಸೈನ್’ ನಲ್ಲಿ ನಿರ್ಮಾಣವಾಗಿವೆ ಈ ಹೊಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಭಿನ್ನ ‘ಡಿಸೈನ್’ ನಲ್ಲಿ ನಿರ್ಮಾಣವಾಗಿವೆ ಈ ಹೊಟೇಲ್ಸ್

 

ಜಗತ್ತಿನಲ್ಲಿ ಅನೇಕ ಅದ್ಭುತ, ಅನನ್ಯ, ಚಿತ್ರ-ವಿಚಿತ್ರ ಸ್ಥಳಗಳಿವೆ. ಇವೆಲ್ಲವನ್ನೂ ನಾವು ನೋಡಿರಲು ಸಾಧ್ಯವಿಲ್ಲ. ಇಂದು ನಾವು ಕೆಲ ಹೊಟೇಲ್ ಗಳ ಬಗ್ಗೆ ನಿಮಗೆ ಹೇಳ್ತೇವೆ. ಚಿತ್ರವಿಚಿತ್ರವಾಗಿ ಕಟ್ಟಿರುವ ಈ ಹೊಟೇಲ್ ಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.

ಒಳಚರಂಡಿ ಪೈಪ್ ಒಳಗೆ ಹೊಟೇಲ್ (ಆಸ್ಟ್ರಿಯಾ) : 2 ಮೀಟರ್ ಉದ್ದದ ಚರಂಡಿಗೆ ಬಳಸುವ ಪೈಪ್ ರೂಪದಲ್ಲಿ ಈ ಹೊಟೇಲ್ ಇದೆ. ಈ ಪೈಪ್ ಒಳಗೆ ಸಣ್ಣ ಹಾಸಿಗೆ, ಕಪಾಟಿದೆ. ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

Dog Bark Park Inn - Wikipediaಡಾಗ್ ಬರ್ಕ್ ಪಾರ್ಕ್ (ಅಮೆರಿಕಾ) : ಗೆಸ್ಟ್ ಹೌಸ್ ದೊಡ್ಡ ನಾಯಿಯ ರೀತಿ ಕಾಣುತ್ತದೆ. ಮರದಿಂದ ಮಾಡಿದ ಈ ಹೊಟೇಲ್ 5 ಮೀಟರ್ ಉದ್ದ ಹಾಗೂ 5 ಮೀಟರ್ ಅಗಲವಿದೆ.

The Magic Mountain - Review of Huilo Huilo Montana Magica Lodge, Neltume -  Tripadvisorಮ್ಯಾಜಿಕ್ ಮೌಂಟೇನ್ ಲಾಡ್ಜ್, ಚಿಲಿ : ಪಿರಾಮಿಡ್ ಆಕಾರದಲ್ಲಿ ಈ ಹೊಟೇಲ್ ಇದೆ. ಈ ಹೊಟೇಲ್ ನಲ್ಲಿ 5 ಮಹಡಿಗಳಿದ್ದು, 13 ಕೊಠಡಿಗಳಿವೆ. ಮರ ಹಾಗೂ ಕಲ್ಲಿನಿಂದ ಇದನ್ನು ಮಾಡಲಾಗಿದೆ.

World's first underwater hotel residence opens - YouTubeಅಂಡರ್ ವಾಟರ್ ಹೊಟೇಲ್ (ದುಬೈ) : ದುಬೈನಲ್ಲಿ ಈ ಹೊಟೇಲನ್ನು ಎರಡು ಡಿಸ್ಕ್ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದು ನೀರಿನೊಳಗಿದ್ದರೆ ಇನ್ನೊಂದು ನೀರಿನಿಂದ ಮೇಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...