![](https://kannadadunia.com/wp-content/uploads/2021/04/Pratap-Simha.jpg)
ಕಲಬುರ್ಗಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಇದೀಗ ಇಬ್ಬರು ಸ್ವಾಮೀಜಿಗಳ ಜಟಾಪಟಿಗೆ ಕಾರಣವಾಗಿದೆ.
ಮೈಸೂರಿಗೆ ಹೋಗಿ ಪ್ರತಾಪ್ ಸಿಂಹ ಚಡ್ಡಿ ಬಿಚ್ಚಿ ಹೊಡಿತೀವಿ ಎಂದಿದ್ದ ಸುಲಫಲ ಮಠದ ಸಾರಂಗಧರ ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದಲಿಂಗ ಸ್ವಾಮೀಜಿ ತಾಕತ್ತಿದ್ದರೆ ಪ್ರತಾಪ್ ಸಿಂಹ ಚಡ್ಡಿ ಬಿಚ್ಚಿ ಹೊಡೆಯಿರಿ. ಆಗ ಮಾತ್ರ ನೀವು ಸ್ವಾಮೀಜಿ ಎಂದು ಜನ ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.
ಜಲಾವೃತಗೊಂಡ ರಸ್ತೆ ಕಾಣದೇ ಕೆರೆಗೆ ಬಿದ್ದ ಕಾರ್: ಅದೃಷ್ಟವಶಾತ್ ಇಬ್ಬರು ಪಾರು
ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮೀಜಿ ಎಂಬ ಖ್ಯಾತಿ ಪಡೆದಿದ್ದೀರಿ ಎಂದು ಕಿಡಿಕಾರಿರುವ ಆಂದೋಲನಾ ಸಿದ್ದಲಿಂಗ ಸ್ವಾಮೀಜಿ, ಸಾರಂಗಧರ ಸ್ವಾಮೀಜಿ ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು, ಆಗ ಎಲ್ಲಿ ಹೋಗಿದ್ದಿರಿ ಸಾರಂಗಧರ ಸ್ವಾಮೀಗಳೇ? ಎಂದು ಪ್ರಶ್ನಿಸಿದ್ದಾರೆ.