alex Certify BIG NEWS: ಡ್ರಗ್ಸ್ ಕೇಸ್ ಗೆ ಹೊಸ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿರುವುದು ನನ್ನ ಹೇಳಿಕೆಯಲ್ಲ ಎಂದ ಆರೋಪಿ ಕಿಶೋರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರಗ್ಸ್ ಕೇಸ್ ಗೆ ಹೊಸ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿರುವುದು ನನ್ನ ಹೇಳಿಕೆಯಲ್ಲ ಎಂದ ಆರೋಪಿ ಕಿಶೋರ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಲಾಗಿರುವ ಹೇಳಿಕೆ ನನ್ನದಲ್ಲ. ನಾನು ಅನುಶ್ರೀ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಡ್ರಗ್ಸ್ ಪ್ರಕರಣದ ಆರೋಪಿ, ಡಾನ್ಸರ್ ಕಿಶೋರ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಿಶೋರ್ ಶೆಟ್ಟಿ, ಅನುಶ್ರೀ ಡ್ರಗ್ಸ್ ಸೇವನೆ ಹಾಗೂ ಸಾಗಾಟ ಮಾಡುತ್ತಿದ್ದರು ಎಂದು ನಾನು ಹೇಳಿದ್ದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಸುದ್ದಿ ತಿಳಿದು ನನಗೆ ಶಾಕ್ ಆಯಿತು. ನಾನು ಅಂತಹ ಯಾವುದೇ ಹೇಳಿಕೆಯನ್ನೇ ನೀಡಿಲ್ಲ. ಅನುಶ್ರೀ ಜೊತೆ ಯಾವುದೇ ಪಾರ್ಟಿಯನ್ನೂ ಮಾಡಿಲ್ಲ. ಚಾರ್ಜ್ ಶೀಟ್ ನಲ್ಲಿರುವುದು ನನ್ನ ಹೇಳಿಕೆಯಲ್ಲ ಎಂದರು.

ಶಾಕಿಂಗ್…! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ

ಡಾನ್ಸ್ ಪ್ರೋಗ್ರಾಮ್ ಗಾಗಿ ಅನುಶ್ರೀಯನ್ನು ಪರಿಚಯ ಮಾಡಿಕೊಟ್ಟಿದ್ದು ತರುಣ್. ತರುಣ್ ನನ್ನ ಸ್ನೇಹಿತ. ನಾನು ಅನುಶ್ರೀಗೆ ಡಾನ್ಸ್ ಪ್ರೋಗ್ರಾಮ್ ಒಂದಕ್ಕೆ ಕೊರಿಯೋಗ್ರಾಫರ್ ಆಗಿದ್ದೆ ಅಷ್ಟೇ. ಆನಂತರದಲ್ಲಿ ನನಗೂ ಅನುಶ್ರಿಗೂ ಯಾವುದೇ ಸಂಪರ್ಕವಿಲ್ಲ. ಅನುಶ್ರೀ ಡ್ರಗ್ಸ್ ಸೇವಿಸುತ್ತಾರೆ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಮಂಗಳೂರಿನಲ್ಲಿ ಒಮ್ಮೆ ಮಾತ್ರ ನಾನು ಡ್ರಗ್ ಸೇವನೆ ಮಾಡಿದ್ದೆ. ಈ ವೇಳೆ ಅನುಶ್ರೀಯಾಗಲಿ ಅಥವಾ ಬೇರೆ ಯಾರೂ ಕೂಡ ಇರಲಿಲ್ಲ. ನಾನು ಡ್ರಗ್ಸ್ ಸೇವಿಸಿ ಡಾನ್ಸ್ ಮಾಡಿಯೂ ಇಲ್ಲ. ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಹೇಳಿಕೆಗಳು ನನ್ನದಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...