ಮುಂಬೈ: ದೇಶಾದ್ಯಂತ ಕೊರೊನಾ ಮೂರನೇ ಅಲೆ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಈ ನಡುವೆ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಮೊದಲ ಬಲಿಯಾಗಿದೆ.
ಮುಂಬೈನ ಘಾಟ್ ಕೋಪರ್ ನಲ್ಲಿ 63 ವರ್ಷದ ಮಹಿಳೆಯೊಬ್ಬರು ಡೆಲ್ಟಾ ಪ್ಲಸ್ ವೈರಸ್ ಗೆ ಬಲಿಯಾಗಿದ್ದಾರೆ. ಕಳೆದ ಜುಲೈನಲ್ಲಿಯೇ ಮಹಿಳೆ ಮೃತಪಟ್ಟಿದ್ದು, ಡೆಲ್ಟಾ ರೂಪಾಂತರಿ ವೈರಾಣುವಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಧೋನಿ – ದಳಪತಿ ವಿಜಯ್ ಭೇಟಿ: ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ
ಇದು ಮಹಾರಾಷ್ಟ್ರದಲ್ಲಿ ವರದಿಯಾದ ಎರಡನೇ ಡೆಲ್ಟಾ ಪ್ಲಸ್ ಸಾವು. ಜೂನ್ 13ರರಂದು ರತ್ನಗಿರಿಯಲ್ಲಿ 80 ವರ್ಷದ ವೃದ್ಧೆ ಈ ಹೆಮ್ಮಾರಿಗೆ ಬಲಿಯಾಗಿದ್ದರು.