alex Certify BIG NEWS: ಟ್ವಿಟ್ಟರ್ ನಲ್ಲಿ ರಾಜ್ಯಪಾಲರನ್ನು ಬ್ಲಾಕ್​ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟ್ವಿಟ್ಟರ್ ನಲ್ಲಿ ರಾಜ್ಯಪಾಲರನ್ನು ಬ್ಲಾಕ್​ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ರಾಜ್ಯಪಾಲ ಜಗದೀಪ್​​ ದಂಖಾರ್​​ರ ಟ್ವಿಟರ್ ಖಾತೆಯನ್ನು ಬ್ಲಾಕ್​ ಮಾಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜ್ಯಪಾಲ ಜಗದೀಪ್​​ ಧಂಖರ್​​ ಫೋನ್​ ಟ್ಯಾಪಿಂಗ್​ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ನಾನು ಈ ಸಂಬಂಧ ಪ್ರಧಾನಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದೇನೆ. ರಾಜ್ಯಪಾಲರು ನಮ್ಮ ಮಾತನ್ನು ಕೇಳುತ್ತಿಲ್ಲ ಹಾಗೂ ಇಲ್ಲಿ ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಧಾನಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ನಾವು ತಾಳ್ಮೆಯಿಂದ ಇದೆಲ್ಲವನ್ನು ಅನುಭವಿಸುತ್ತಿದ್ದೇವೆ. ರಾಜ್ಯಪಾಲರು ಅನೇಕ ಫೈಲ್​ಗಳನ್ನು ಕ್ಲಿಯರ್​ ಮಾಡದೆಯೇ ಪೆಂಡಿಂಗ್​ ಇಟ್ಟಿದ್ದಾರೆ. ಪ್ರತಿಯೊಂದು ಫೈಲ್​ಗಳು ಪೆಂಡಿಂಗ್​ ಆಗಿಯೇ ಉಳಿದಿದೆ. ಅಂತದ್ರಲ್ಲಿ ಇವರು ಸರ್ಕಾರದ ನಿರ್ಧಾರಗಳ ಬಗ್ಗೆ ಮಾತನಾಡೋಕೆ ಯಾವ ನೈತಿಕತೆಯನ್ನು ಹೊಂದಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಈ ವಿಚಾರವಾಗಿ ನಾನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಗೆ ನಾಲ್ಕು ಪತ್ರಗಳನ್ನು ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.

ಪೆಗಾಸಸ್​​ ರಾಜ್ಯಪಾಲ ಜಗದೀಪ್​ ದಂಖಾರ್​ ಅವರ ನಿವಾಸದಲ್ಲಿಯೇ ನಡೆಯುತ್ತಿದೆ. ಇಷ್ಟಾದರೂ ಕೂಡ ಪ್ರಧಾನಿ ಮೋದಿ ಇವರನ್ನು ಏಕೆ ಕೆಳಗಿಳಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...