ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ರಾಜ್ಯಪಾಲ ಜಗದೀಪ್ ದಂಖಾರ್ರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜ್ಯಪಾಲ ಜಗದೀಪ್ ಧಂಖರ್ ಫೋನ್ ಟ್ಯಾಪಿಂಗ್ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನಾನು ಈ ಸಂಬಂಧ ಪ್ರಧಾನಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದೇನೆ. ರಾಜ್ಯಪಾಲರು ನಮ್ಮ ಮಾತನ್ನು ಕೇಳುತ್ತಿಲ್ಲ ಹಾಗೂ ಇಲ್ಲಿ ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಧಾನಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.
ನಾವು ತಾಳ್ಮೆಯಿಂದ ಇದೆಲ್ಲವನ್ನು ಅನುಭವಿಸುತ್ತಿದ್ದೇವೆ. ರಾಜ್ಯಪಾಲರು ಅನೇಕ ಫೈಲ್ಗಳನ್ನು ಕ್ಲಿಯರ್ ಮಾಡದೆಯೇ ಪೆಂಡಿಂಗ್ ಇಟ್ಟಿದ್ದಾರೆ. ಪ್ರತಿಯೊಂದು ಫೈಲ್ಗಳು ಪೆಂಡಿಂಗ್ ಆಗಿಯೇ ಉಳಿದಿದೆ. ಅಂತದ್ರಲ್ಲಿ ಇವರು ಸರ್ಕಾರದ ನಿರ್ಧಾರಗಳ ಬಗ್ಗೆ ಮಾತನಾಡೋಕೆ ಯಾವ ನೈತಿಕತೆಯನ್ನು ಹೊಂದಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಈ ವಿಚಾರವಾಗಿ ನಾನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಗೆ ನಾಲ್ಕು ಪತ್ರಗಳನ್ನು ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.
ಪೆಗಾಸಸ್ ರಾಜ್ಯಪಾಲ ಜಗದೀಪ್ ದಂಖಾರ್ ಅವರ ನಿವಾಸದಲ್ಲಿಯೇ ನಡೆಯುತ್ತಿದೆ. ಇಷ್ಟಾದರೂ ಕೂಡ ಪ್ರಧಾನಿ ಮೋದಿ ಇವರನ್ನು ಏಕೆ ಕೆಳಗಿಳಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದರು.