alex Certify BIG NEWS: ಜುಲೈ 1ರಿಂದ ಶಾಲೆಗಳು ಆರಂಭ; ರಜಾ ದಿನಗಳ ಬಗ್ಗೆಯೂ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜುಲೈ 1ರಿಂದ ಶಾಲೆಗಳು ಆರಂಭ; ರಜಾ ದಿನಗಳ ಬಗ್ಗೆಯೂ ಇಲ್ಲಿದೆ ಮಾಹಿತಿ

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ನಿಗದಿ ಮಾಡಿ ಆದೇಶ ಹೊರಡಿಸಲಾಗಿದ್ದು, ಜುಲೈ 1ರಿಂದ ಶಾಲೆಗಳು ಆರಂಭವಾಗಲಿದೆ. ಜುಲೈ 1ರಿಂದ ಅಕ್ಟೋಬರ್ 10ರವರೆಗೆ ಮೊದಲ ಅವಧಿ ಹಾಗೂ ಅಕ್ಟೋಬರ್ 21, 2021ರಿಂದ ಏಪ್ರಿಲ್ 31, 2022ರವರೆಗೆ ಎರಡನೇ ಅವಧಿ ಇರಲಿದೆ.

ಜೂನ್ 31ರ ಒಳಗೆ ಮಕ್ಕಳ ದಾಖಲಾತಿ ಮುಗಿಸುವಂತೆ ಸೂಚಿಸಲಾಗಿದ್ದು, ಅಕ್ಟೋಬರ್ 10ರಿಂದ 20ರವರೆಗೆ ದಸರಾ ರಜೆ ಇರಲಿದೆ. ಕೊರೊನಾ ಸಂಕಷ್ಟದ ಕಾರಣಕ್ಕೆ ಭೌತಿಕವಾಗಿ ಶಾಲೆ ನಡೆಸಲು ಸಾಧ್ಯವಾಗದಿದ್ದರೆ ಆನ್ ಲೈನ್, ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಮಾಡಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಾಲಾ ಕರ್ತವ್ಯದ ಮೊದಲ ಅವಧಿ: 1/7/2021 ರಿಂದ 9/10/2021.

ಎರಡನೇ ಅವಧಿ: 21/10/2021ರಿಂದ 30/4/2022ರವರೆಗೆ ಇರಲಿದೆ.

ರಜಾ ದಿನಗಳು;  10/10/2021ರಿಂದ 20/10/2021ರವರೆಗೆ ಹಾಗೂ ಬೇಸಿಗೆ ರಜೆ-1/5/2022ರಿಂದ 28/5/2022ರವರೆಗೆ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...