alex Certify BIG NEWS: ‘ಜೀಸಸ್’ ಮಾತ್ರ ನಿಜವಾದ ದೇವರು; ರಾಹುಲ್ ಮುಂದೆಯೇ ಹೇಳಿದ ಪಾದ್ರಿ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಜೀಸಸ್’ ಮಾತ್ರ ನಿಜವಾದ ದೇವರು; ರಾಹುಲ್ ಮುಂದೆಯೇ ಹೇಳಿದ ಪಾದ್ರಿ; ವಿಡಿಯೋ ವೈರಲ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಿಂದ ‘ಭಾರತ್ ಜೋಡೋ’ಯಾತ್ರೆ ಆರಂಭಿಸಿದ್ದು ಅವರಿಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಅವರ ಈ ಯಾತ್ರೆಯ ಮಧ್ಯೆ ಈಗ ರಾಹುಲ್ ವಿವಾದವೊಂದಕ್ಕೆ ಸಿಲುಕಿದ್ದಾರೆ.

ತಮ್ಮ ಹೇಳಿಕೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಪಾದ್ರಿ ಒಬ್ಬರು, ಜೀಸಸ್ ಮಾತ್ರ ನಿಜವಾದ ದೇವರು. ಶಕ್ತಿ ಮತ್ತು ಇತರೆ ಹಿಂದೂ ದೇವತೆಗಳಂತಲ್ಲ ಎಂದು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ಯಾಕುಮಾರಿಯ ಮುಳಗುಮೂಡುವಿನಲ್ಲಿ ತಮ್ಮ ದ್ವೇಷ ಭಾಷಣಕ್ಕೆ ಹೆಸರಾಗಿರುವ ಪಾದ್ರಿ ಜಾರ್ಜ್ ಪೊನ್ನಯ್ಯ ಮತ್ತಿತರರು ರಾಹುಲ್ ಗಾಂಧಿಯವರನ್ನು ಭೇಟಿಯಾದ ವೇಳೆ ಈ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...