ಬೆಂಗಳೂರು: ಬಿಟ್ ಕಾಯಿನ್ ದಂಧೆ ಆರೋಪಿ, ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಹೋಟೆಲ್ ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧನಕ್ಕೀಡಾಗಿದ್ದ ಶ್ರೀಕಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ಆದರೀಗ ಜಾಮೀನಿನ ಮೇಲೆ ಶ್ರೀಕಿ ಬಿಡುಗಡೆಯಾಗಿದ್ದಾನೆ.
ಬೆಚ್ಚಿ ಬೀಳಿಸುತ್ತೆ ಈ ಸುದ್ದಿ: ಕಡುಬಡತನದಿಂದ ಪಾರಾಗಲು ಮೂರು ದಿನದ ಹಸುಗೂಸನ್ನು ಮಾರಾಟ ಮಾಡಿದ ತಾಯಿ..!
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕಿ, ಬಿಟ್ ಕಾಯಿನ್ ಕೇಸ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಅಂಥಹ ಯಾವ ಕೆಲಸವನ್ನೂ ಮಾಡಿಲ್ಲ. ಇನ್ನು ನನಗೆ ಜಾಮೀನು ಕೊಟ್ಟವರು ಯಾರು ಎಂಬುದು ಕೂಡ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಬಿಟ್ ಕಾಯಿನ್ ವಿಚಾರವಾಗಿ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಶ್ರೀಕಿ, ದೊಡ್ಡವರು ದೊಡ್ಡ ದೊಡ್ಡವರ ಹೆಸರು ಹೇಳ್ತಾರೆ. ಮಾಧ್ಯಮಗಳಲ್ಲಿ ಅನಗತ್ಯವಾಗಿ ಹೈಪ್ ಕ್ರಿಯೇಟ್ ಆಗಿದೆ. ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿ ಆಟೋ ಹತ್ತಿ ತೆರಳಿದ್ದಾನೆ ಎಂದು ತಿಳಿದುಬಂದಿದೆ.