ಬೆಳಗಾವಿ; ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದ್ದು, ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
10 ದಿನಗಳ ಕಾಲ ಅಧಿವೇಶನ ನಡೆದಿದ್ದು, 8 ಶಾಸಕರು ಸಂಪೂರ್ಣವಾಗಿ ಕಲಾಪಕ್ಕೆ ಗೈರಾಗಿದ್ದಾರೆ. ಶೇ.75ರಷ್ಟು ಶಾಸಕರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಒಂದು ವಾರ ಕಾಲ ಅಧಿವೇಶನ ನಡೆಸುವಂತೆ ಶಾಸಕರು ಒತ್ತಾಯಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಹೆಚ್ಚು ದಿನ ಕಲಾಪ ನಡೆಸಲಾಗುವುದು ಎಂದರು.
33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ
ಒಟ್ಟು 10 ದಿನಗಳ ಕಾಲ ನಡೆದ ಅಧಿವೇಶನದಲ್ಲಿ 52 ಗಂಟೆಗಳ ಕಾಲ ಕಲಾಪ ನಡೆದಿದ್ದು, 150 ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ನಿಯಮಾವಳಿ, ಕಾಲಮಿತಿಯಿಂದ ಹೆಚ್ಚಿನವರಿಗೆ ಅವಕಾಶ ಸಿಕ್ಕಿಲ್ಲ. ಮುಂದೆ ಹೆಚ್ಚು ದಿನ ಸದನ ನಡೆಸಲು ಸರ್ಕಾರಕ್ಕೆ ತಿಳಿಸುತ್ತೇವೆ. ಈ ಬಾರಿಯ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಇನ್ನು ಸದನದಲ್ಲಿ ಶಿಸ್ತು ಕಾಪಾಡಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ ಸಲಹೆಯನ್ನು ಸ್ವೀಕರಿಸುತ್ತೇವೆ. ನಾನು ವಿಧಾನಸಭಾ ಸ್ಪೀಕರ್ ಆಗಿ ಎರಡೂವರೆ ವರ್ಷಗಳಾಗಿವೆ. ಬಿ.ಎಸ್.ವೈ ನೀಡಿರುವ ಸಲಹೆಗಳನ್ನು ಜಾರಿಗೊಳಿಸಲು ಆಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.