alex Certify BIG NEWS: ಚಂಡಮಾರುತದ ಅಟ್ಟಹಾಸಕ್ಕೆ ಐವರು ಬಲಿ; 30,000ಕ್ಕೂ ಹೆಚ್ಚು ಜನರ ಸ್ಥಳಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಂಡಮಾರುತದ ಅಟ್ಟಹಾಸಕ್ಕೆ ಐವರು ಬಲಿ; 30,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಅಹಮದಾಬಾದ್: ಬಿಪರ್ ಜಾಯ್ ಚಂಡ ಮಾರುತದಿಂದಾಗಿ ದೇಶದ ಕರಾವಳಿ ಪ್ರದೇಶಗಳು ನಲುಗಿದ್ದು, ಈವರೆಗೆ ಐವರು ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದಾಗಿ ಗುಜರಾತ್ ಕರಾವಳಿಯಲ್ಲಿ ಅವಘಡಗಳು ಸಂಭವಿಸಿದ್ದು, ಬಿರುಗಾಳಿ, ಮಳೆಯಿಂದಾಗಿ ಐದು ಜನರು ಮೃತಪಟ್ಟಿದ್ದಾರೆ.

ಸಮುದ್ರದ ಭಾರಿ ಗಾತ್ರದ ಅಲೆಗಳು ಮನೆಗಳು, ಕಟ್ಟಡಗಳಿಗೆ ಅಪ್ಪಳಿಸುತ್ತಿದ್ದು, ಹಲವೆಡೆ ಕಟ್ಟಡಗಳು ಕುಸಿದು ಬಿದ್ದಿವೆ. ಗುಜರಾತ್ ಕರಾವಳಿಯ 30,000 ಜನರನ್ನು ಸ್ಥಳಾಂತರ ಮಾಡಲಾಗಿದೆ.

ಸೌರಾಷ್ಟ್ರ, ಕಛ್ ನಲ್ಲಿ 14,088 ಜನರನ್ನು ಸ್ಥಳಾಂತರಿಸಲಾಗಿದ್ದರೆ ದ್ವಾರಕಾದಲ್ಲಿ 5000, ರಾಜ್ ಕೋಟ್ ನಲ್ಲಿ 4,000, ಮೊರ್ಬಿಯಲ್ಲಿ 2000, ಜಾಮ್ ನಗರದಲ್ಲಿ 1500 ಜನರನ್ನು ಸ್ಥಳಾಂತರ ಮಾಡಲಾಗಿದೆ. 284 ಗರ್ಭಿಣಿಯರು ಸೇರಿದಂತೆ ಒಟ್ಟು 30,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ನಡಿವೆ ಗುಜರಾತ್ ಕರಾವಳಿ ಪ್ರದೇಶದಲ್ಲಿ ಗಂಟೆಗೆ 145ರಿಂದ 150 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಹಲವೆಡೆ ಭಾರಿ ಮಳೆಯಾಗುತ್ತಿದೆ. ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...