alex Certify BIG NEWS: ಗೋವಾದಲ್ಲಿ ಕಾಂಗ್ರೆಸ್‌ ಮುನ್ನಡೆ; ಡಿಕೆಶಿ ಜೊತೆ ರೆಸಾರ್ಟ್‌ ನಲ್ಲಿ ಬೀಡುಬಿಟ್ಟ ಪಕ್ಷದ ಅಭ್ಯರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೋವಾದಲ್ಲಿ ಕಾಂಗ್ರೆಸ್‌ ಮುನ್ನಡೆ; ಡಿಕೆಶಿ ಜೊತೆ ರೆಸಾರ್ಟ್‌ ನಲ್ಲಿ ಬೀಡುಬಿಟ್ಟ ಪಕ್ಷದ ಅಭ್ಯರ್ಥಿಗಳು

ಗೋವಾ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಗೋವಾದ 40 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಕ್ಷೇತ್ರಗಳ ಮುನ್ನಡೆ ವಿವರ ಲಭ್ಯವಾಗಿದ್ದು, ಕಾಂಗ್ರೆಸ್‌ 20 ಹಾಗೂ ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಇದರ ಮಧ್ಯೆ ಕುದುರೆ ವ್ಯಾಪಾರ ಆರಂಭವಾಗಬಹುದೆಂಬ ಭೀತಿ ಹಿನ್ನಲೆಯಲ್ಲಿ ಕಾಂಗ್ರೆಸ್‌ ನಾಯಕರು, ತಮ್ಮ ಅಭ್ಯರ್ಥಿಗಳು ರೆಸಾರ್ಟ್‌ ನಲ್ಲಿ ಬೀಡುಬಿಡುವಂತೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಗೋವಾ ಕಾಂಗ್ರೆಸ್‌ ನ 40 ಅಭ್ಯರ್ಥಿಗಳು ಖಾಸಗಿ ರೆಸಾರ್ಟ್‌ ಒಂದರಲ್ಲಿ ತಂಗಿದ್ದಾರೆನ್ನಲಾಗಿದೆ.

ಅಂತಿಮ ಫಲಿತಾಂಶ ಹೊರ ಬೀಳುವವರೆಗೂ ಇವರುಗಳು ರೆಸಾರ್ಟ್‌ ನಲ್ಲಿಯೇ ಇರಲಿದ್ದು, ಒಂದೊಮ್ಮೆ ಪಕ್ಷಕ್ಕೆ ಬಹುಮತ ಬಂದರೆ ನೇರವಾಗಿ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...