alex Certify BIG NEWS: ಗರ್ಭಿಣಿಯರ ನೇಮಕಕ್ಕೆ ತಾತ್ಕಾಲಿಕ ತಡೆ ಹಾಕಿದ ಮತ್ತೊಂದು ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗರ್ಭಿಣಿಯರ ನೇಮಕಕ್ಕೆ ತಾತ್ಕಾಲಿಕ ತಡೆ ಹಾಕಿದ ಮತ್ತೊಂದು ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತರ, ಮತ್ತೊಂದು ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಮೂರು ತಿಂಗಳ ಗರ್ಭಿಣಿಯರಿಗೆ ಬ್ಯಾಂಕ್‌ಗೆ ನೇಮಕವಾಗಲು ತಾತ್ಕಾಲಿಕ ಅವಕಾಶ ನಿರಾಕರಿಸಿ ವಿವಾದ ಮೈಮೇಲೆ ಎಳೆದುಕೊಂಡಿದೆ.

ಇಂಡಿಯನ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ಉದ್ಯೋಗಕ್ಕಾಗಿ ದೈಹಿಕ ಸಾಮರ್ಥ್ಯದ ಮಾರ್ಗದರ್ಶಿ ಸೂತ್ರ ಮತ್ತು ಮಾನದಂಡಗಳ ಪ್ರಕಾರ, ಆಯ್ಕೆ ಮಾಡಿದ ಹುದ್ದೆಯ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಆರು ವಾರಗಳ ನಂತರ ಮರು ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಗಳ ಪರಿಣಾಮವಾಗಿ, 12 ವಾರಗಳ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗರ್ಭಿಣಿ ಎಂದು ಕಂಡುಬಂದ ಮಹಿಳಾ ಅಭ್ಯರ್ಥಿಯನ್ನು ನಿರ್ದಿಷ್ಟ ಅವಧಿ ಮುಗಿಯುವವರೆಗೆ ತಾತ್ಕಾಲಿಕವಾಗಿ ಅನರ್ಹ ಎಂದು ಘೋಷಿಸಬೇಕು. ಆರು ವಾರಗಳ ನಂತರ ಅಭ್ಯರ್ಥಿಯನ್ನು ಫಿಟ್ನೆಸ್ ಪ್ರಮಾಣಪತ್ರಕ್ಕಾಗಿ ಮರುಪರಿಶೀಲಿಸಬೇಕು ಎಂದು ಹೇಳಿತ್ತು.

ಹೀಗಾಗಿ ಗರ್ಭಿಣಿ ಮಹಿಳೆಯರು ನೇಮಕ ವಿಳಂಬವಾಗುತ್ತದೆ ಮತ್ತು ಅಂತಹ ಅಭ್ಯರ್ಥಿಗಳು ಜ್ಯೇಷ್ಠತೆ ಕಳೆದುಕೊಳ್ಳುತ್ತಾರೆ. ಈ ನಿಯಮದ ಬಗ್ಗೆ ಕಾರ್ಮಿಕ ಸಂಘಟನೆ ದನಿ ಎತ್ತಿ ಆಕ್ಷೇಪಣೆ ಸಲ್ಲಿಸಿತು. ತಾರತಮ್ಯ ಮಾಡಕೂಡದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಆಗ್ರಹಿಸಿತು‌

ವಿವಿಧ ವಲಯಗಳಿಂದ ಟೀಕೆಗಳ ನಂತರ ಎಸ್‌ಬಿಐ ಗರ್ಭಿಣಿಯರ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿಗಳನ್ನು ಅಮಾನತುಗೊಳಿಸಿದ್ದನ್ನು ಗಮನಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...