ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರ ವಿಚಾರದಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಮಹತ್ವದ ಮಾಹಿತಿಯನ್ನು ನೀಡಿದೆ. ಪಿಸೋಚಿನ್ ಹಾಗೂ ಖಾರ್ಕಿವ್ನಲ್ಲಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಮುಂದಿನ ಕೆಲವೇ ಗಂಟೆಗಳಲ್ಲಿ ಏರ್ಲಿಫ್ಟ್ ಮಾಡಲಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.
ಯುದ್ಧ ಪೀಡಿತ ಸುಮಿಯ ಮೇಲೆ ಮುಖ್ಯ ಗಮನವನ್ನು ನೀಡಿದ್ದೇವೆ. ಈಗಾಗಲೇ ಮೂರು ಬಸ್ಗಳನ್ನು ಪಿಸೊಚಿನ್ಗೆ ತಲುಪಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಪಶ್ಚಿಮ ಉಕ್ರೇನ್ಗೆ ತೆರಳಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಪಿಸೋಚಿನ್ ಹಾಗೂ ಖಾರ್ಕಿವ್ನಿಂದ ನಾವು ಮುಂದಿನ ಕೆಲವೇ ಗಂಟೆಗಳಲ್ಲಿ ಎಲ್ಲರನ್ನೂ ಸ್ಥಳಾಂತರಿಸುತ್ತಿದ್ದೇವೆ. ಇಲ್ಲಿಯವರೆಗೆ ಎಲ್ಲಾ ಭಾರತೀಯರು ಖಾರ್ಕಿವ್ನಿಂದ ಹೊರಬಂದಿದ್ದಾರೆಂದು ನನಗೆ ತಿಳಿದಿದೆ. ನಮ್ಮ ಮುಖ್ಯ ಗಮನ ಇದೀಗ ಸುಮಿ ಮೇಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಪೂರ್ವ ಉಕ್ರೇನಿಯನ್ ನಗರ ಸುಮಿಯಲ್ಲಿ ನೂರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇದು ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವೆ ತೀವ್ರವಾದ ಹೋರಾಟಕ್ಕೆ ಸಾಕ್ಷಿಯಾಗುತ್ತಿರುವ ಸಂಘರ್ಷದ ವಲಯಗಳಲ್ಲಿ ಒಂದಾಗಿದೆ.