ದಾವಣಗೆರೆ: ಕೊರೊನಾ ತೊಲಗಿಸಲೆಂದು ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ-ಹವನ ಮಾಡಿಸಿ ಚರ್ಚೆಗೆ ಗ್ರಾಸವಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದ ವೃದ್ಧನ ದೇಹದಲ್ಲಾಯ್ತು ವಿಚಿತ್ರ ಬದಲಾವಣೆ..!
ದಾವಣಗೆರೆಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಿನ್ನೆ ರೇಣುಕಾಚಾರ್ಯ ಹಾಗು ದಂಪತಿ ಮೃತ್ಯುಂಜಯ ಹೋಮ, ಧ್ವನ್ವಂತರಿ ಹೋಮ ಮಾಡಿಸಿದ್ದರು. ಈ ಕುರಿತ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೋಂಕಿತರು ತಹಶೀಲ್ದಾರ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ.
ಭಾವಿ ಅಳಿಯನ ಸಂಪಾದನೆ ತಿಳಿದುಕೊಳ್ಳಲು ಅತ್ತೆ – ಮಾವನಿಂದ ಹೈಡ್ರಾಮಾ…!
ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದರೆ ನಾವ್ಯಾರೂ ಊಟ-ಉಪಹಾರವನ್ನೂ ಸೇವಿಸಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ. ಈ ವೇಳೆ ಶಾಸಕ ರೇಣುಕಾಚಾರ್ಯ, ತಾನು ಲೋಕಕಲ್ಯಾಣಕ್ಕೆ, ಜನ ಹಿತಕ್ಕಾಗಿ ಹೋಮ ಮಾಡಿಸಿದ್ದೇನೆ. ನನ್ನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿರುವುದರ ಹಿಂದೆ ಕಾಂಗ್ರೆಸ್ ಮಾಜಿ ಶಾಸಕರ ಕೈವಾಡವಿದೆ ತಾಕತ್ತಿದ್ದರೆ ಕೇಸ್ ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ.