ಬೆಂಗಳೂರು: ಕೊರೊನಾ ಮೂರನೇ ಅಲೆ, ಒಮಿಕ್ರಾನ್ ಭೀತಿ ನಡುವೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದ್ದು, ಕೋವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಕೊರೊನಾ ಸೋಂಕು ಅಂತ್ಯವಾಗುತ್ತಿದೆ. ಆದರೆ ನಿಖರವಾಗಿ ಸಮಯ ಹೇಳಲು ಸಾಧ್ಯವಿಲ್ಲ. ರಾಜ್ಯಕ್ಕೆ 3, 4 ಅಲೆಗಳು ಬಂದರೂ ದೊಡ್ಡ ಪರಿಣಾಮವಾಗಿಲ್ಲ. ಆದರೂ ಮುನ್ನೆಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಿದರು.
ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೇಡ. ಇದು ಹೊಸ ತಳಿಯಾಗಿರುವುದರಿಂದ ತಕ್ಷಣಕ್ಕೆ ಗೊತ್ತಾಗಲ್ಲ, ಅಧ್ಯಯನದ ಅಗತ್ಯವಿದೆ. ಆದರೆ ಒಮಿಕ್ರಾನ್ ನಿಂದ ಯಾವುದೇ ಸಾವು ಸಂಭವಿಸಿಲ್ಲ, ಒಮಿಕ್ರಾನ್ ಕೇಸ್ ಪತ್ತೆಯಾದ ಬೇರೆ ದೇಶಗಳಲ್ಲಿ ಕೂಡ ಯಾವುದೇ ದುರಂತ ಕಂಡುಬಂದಿಲ್ಲ. ಹೀಗಾಗಿ ಆತಂಕ ಪಡುವ ಅಗತವಿಲ್ಲ. ಸಧ್ಯಕ್ಕೆ ಕೋವಿಡ್ ಲಸಿಕೆ ಮಾತ್ರ ಅಸ್ತ್ರವಾಗಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವುದು ಉತ್ತಮ ಎಂದರು.
ರೊಮ್ಯಾನ್ಸ್ ಹೆಚ್ಚಿಸುತ್ತದೆ ಬಾಡಿ ‘ಮಸಾಜ್’
ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸ ನೋಡಿದರೆ ಮೊದಲ ಹಾಗೂ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಮೂರನೇ ಅಲೆಯಲ್ಲಿ ದೊಡ್ಡ ಪರಿಣಾಮವಾಗಲ್ಲ. ಮುಂಜಾಗೃತೆ ಅಗತ್ಯ ಎಂದು ಹೇಳಿದರು.