alex Certify BIG NEWS: ಕೋವಿಡ್‌ಗೆ ಜನರನ್ನು ಬಲಿಕೊಟ್ಟು, ಭ್ರಷ್ಟೋತ್ಸವ ಮಾಡಲು ಹೊರಟ ಬಿಜೆಪಿ; ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್‌ಗೆ ಜನರನ್ನು ಬಲಿಕೊಟ್ಟು, ಭ್ರಷ್ಟೋತ್ಸವ ಮಾಡಲು ಹೊರಟ ಬಿಜೆಪಿ; ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಬಿಜೆಪಿ ಜನೋತ್ಸವ ಸಮಾವೇಶದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ಸರ್ಕಾರ ಕೋವಿಡ್‌ನಿಂದ ಮೃತರಾದವರ ಸಮಾಧಿಗಳ ಮೇಲೆ ಬ್ರಷ್ಟೋತ್ಸವ ನಡೆಸಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದೆ.

ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಸುಧಾಕರ್ ಅವರು ಕೋವಿಡ್ ಹೆಣಗಳ ಮೇಲೆ ಮಾಡಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ. ಈ ಸಮಾವೇಶಕ್ಕೆ ಕೋವಿಡ್ ಮೃತರ ಶಾಪ ತಟ್ಟುವುದು ನಿಶ್ಚಿತ. ಕೋವಿಡ್‌ಗೆ ಜನರನ್ನು ಬಲಿಕೊಟ್ಟು, ಕರೊನಾ ಹೆಸರಲ್ಲಿ ಲೂಟಿ ಮಾಡಿದ ಪಾಪದ ಹಣದಲ್ಲಿ ಬಿಜೆಪಿ ಭ್ರಷ್ಟೋತ್ಸವ ನಡೆಯುತ್ತಿದೆ ಎಂದು ಕಿಡಿಕಾರಿದೆ.

ನಿಗದಿಯಂತೆ ಸಮಾವೇಶ ನಡೆಸಲಾಗದ ವಿಘ್ನಗಳು, ಮೂರ್ ಮೂರು ಭಾರಿ ದಿನಾಂಕ ಬದಲಾವಣೆ. ಸಮಾವೇಶದ ಹೆಸರು ಬದಲಾವಣೆ. ಇವೆಲ್ಲವೂ ಕೋವಿಡ್‌ನಿಂದ ನರಳಿದವರ ಶೋಕದ ಫಲವಲ್ಲವೇ? ಪಾಪದ ಹಣದ ಶಾಪವಲ್ಲವೇ? ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...