ಕಲಬುರ್ಗಿ: ಕೊರೊನಾ ಲಾಕ್ ಡೌನ್ ನಡುವೆ ಶಾಲೆಗಳು ಇಲ್ಲದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಪಿಡುಗು ಹೆಚ್ಚುತ್ತಿದ್ದು, ಅಪ್ರಾಪ್ತ ಹೆಣ್ಣು ಮಕ್ಕಳ ಬದುಕು ದುರಂತದತ್ತ ಸಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ 5 ಬಾಲ್ಯವಿವಾಹಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ 2 ಕಡೆದಳಲ್ಲಿ ದಾಳಿ ನಡೆಸಿ ಬಾಲ್ಯವಿವಾಹ ನಿಲ್ಲಿಸಿದ್ದಾರೆ. ರಾಜವಾಳ ಗ್ರಾಮದಲ್ಲಿ 4, ಆಂದೊಲನ ಗ್ರಾಮದಲ್ಲಿ ನಡೆಯುತ್ತಿದ್ದ ಒಂದು ಬಾಲ್ಯವಿವಾಹವನ್ನು ತಡೆದಿದ್ದಾರೆ.