alex Certify Big News: ಕೊರೊನಾದ ಎರಡು ಡೋಸ್‌ ಲಸಿಕೆ ಪಡೆದಿದ್ದರೂ​ ನಟ ಜಾನ್​ ಅಬ್ರಹಾಂ ದಂಪತಿಗೆ ಸೋಂಕು ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕೊರೊನಾದ ಎರಡು ಡೋಸ್‌ ಲಸಿಕೆ ಪಡೆದಿದ್ದರೂ​ ನಟ ಜಾನ್​ ಅಬ್ರಹಾಂ ದಂಪತಿಗೆ ಸೋಂಕು ದೃಢ

ಬಾಲಿವುಡ್​ನ ಹೆಸರಾಂತ ನಟ, ನಿರ್ಮಾಪಕ ಜಾನ್​ ಅಬ್ರಹಾಂ ಹಾಗೂ ಅವರ ಪತ್ನಿ ಪ್ರಿಯಾ ಕೊರೊನಾ ಸೋಂಕಿಗೆ ಒಳಗಾಗಿದ್ದು ಪ್ರಸ್ತುತ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ.

ಈ ವಿಚಾರವನ್ನು ಸೋಶಿಯಲ್​ ಮೀಡಿಯಾ ಮೂಲಕ ಇಂದು ಶೇರ್​ ಮಾಡಿರುವ ನಟ ಜಾನ್​ ಅಬ್ರಹಾಂ ಮೂರು ದಿನಗಳ ಹಿಂದೆ ತಾವು ಭೇಟಿಯಾಗಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್​ ಇತ್ತು ಎಂದು ಮಾಹಿತಿ ನೀಡಿದ್ದಾರೆ.

ನಾನು ಮೂರು ದಿನಗಳ ಹಿಂದೆ ಕೋವಿಡ್​ ಸೋಂಕನ್ನು ಹೊಂದಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದೆ. ನನಗೆ ಮೊದಲು ಅವರಿಗೆ ಕೊರೊನಾ ಸೋಂಕಿದೆ ಎಂಬುದು ತಿಳಿದಿರಲಿಲ್ಲ. ನಾನು ಹಾಗೂ ಪ್ರಿಯಾ ಇಬ್ಬರಿಗೂ ಕೋವಿಡ್​ ಸೋಂಕು ತಗುಲಿದೆ. ನಾವು ಮನೆಯಲ್ಲಿಯೇ ಕ್ವಾರಂಟೈನ್​ ಆಗಿದ್ದೇವೆ. ನಾವು ಯಾರೊಂದಿಗೂ ಸಂಪರ್ಕವನ್ನು ಹೊಂದಿಲ್ಲ. ನಮಗೆ ಸೌಮ್ಯ ಪ್ರಮಾಣದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಜಾನ್​ ಅಬ್ರಹಾಂ ಬರೆದುಕೊಂಡಿದ್ದಾರೆ.

ನಾವಿಬ್ಬರೂ ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದೇವೆ. ನಮಗೆ ಸೌಮ್ಯ ಲಕ್ಷಣಗಳು ಮಾತ್ರ ಕಾಣಿಸಿಕೊಂಡಿವೆ. ಎಲ್ಲರೂ ಆರೋಗ್ಯವಾಗಿರಿ. ಮಾಸ್ಕ್​ ಧರಿಸಿ ಎಂದು ಬರೆದಿದ್ದಾರೆ.

ಇತ್ತೀಚಿಗೆ ಮೃನಾಲ್​ ಠಾಕೂರ್​, ನೋರಾ ಫತೇಹಿ ಹಾಗೂ ಶಿಲ್ಪಾ ಶಿರೋಡ್​ಕರ್​ ಸೇರಿದಂತೆ ಅನೇಕ ಬಾಲಿವುಡ್​ ತಾರೆಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಕಳೆದ ವಾರ ಅರ್ಜುನ್​ ಕಪೂರ್​ ಹಾಗೂ ಅವರ ಸೋದರ ಸಂಬಂಧಿ ಮತ್ತು ನಿರ್ಮಾಪಕಿ ರಿಯಾ ಕಪೂರ್​ ಹಾಗೂ ಅವರ ಪತಿ ಕರಣ್​ ಬೂಲಾನಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅರ್ಜುನ್​ ಸಹೋದರಿ ಅಂಶುಲಾ ಕಪೂರ್​ ಕೂಡ ಕೋವಿಡ್​ಗೆ ತುತ್ತಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...