ಬೆಂಗಳೂರು: ಕೆ.ಎಸ್.ಈಶ್ವರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕುರುಬ ಸಮುದಾಯದ ಮಠಾಧೀಶರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕುರುಬ ಸಮುದಾಯದ ಸ್ವಾಮೀಜಿಗಳು, ಈಶ್ವರಪ್ಪಗೆ ಸಿಎಂ ಸ್ಥಾನ ಸಿಗಬೇಕಿತ್ತು. ಆದ್ರೆ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯಿತು. ಆದರೂ ಪರವಾಗಿಲ್ಲ ಬೊಮ್ಮಾಯಿ ಉತ್ತಮ ಆಡಳಿತಗಾರ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಗೊಂದಲ ಈಗ ಬಗೆಹರಿದಿದೆ. ಹಾಗಂತ ಪಕ್ಷಕ್ಕಾಗಿ ದುಡಿದ ಈಶ್ವರಪ್ಪನವರನ್ನು ಕಡೆಗಣಿಸಬಾರದು. ಈಶ್ವರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ರೇವಣ ಸಿದ್ದೇಶ್ವರ ಗುರುಪೀಠದ ಶಾಂತಮಯ ಶಿವಾಚಾರ್ಯ ಶ್ರೀಗಳು ಹೇಳಿದ್ದಾರೆ.
ಭೂಗತ ಪಾತಕಿ ಛೋಟಾ ರಾಜನ್ ಮತ್ತೊಮ್ಮೆ ಏಮ್ಸ್ ಆಸ್ಪತ್ರೆಗೆ ದಾಖಲು
ಇದೇ ವೇಳೆ ಮಾತನಾಡಿದ ಅಮರೇಶ್ವರ ಸ್ವಾಮೀಜಿ, ಪಕ್ಷದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಇಂಥ ನಾಯಕನಿಗೆ ಅನ್ಯಾಯವಾಗಬಾರದು. ಈಶ್ವರಪ್ಪನವರಿಗೆ ಉನ್ನತ ಸ್ಥಾನ ನೀಡಲೇಬೇಕು. ಈ ಬಗ್ಗೆ ನಾವು ವರಿಷ್ಠರ ಗಮನಕ್ಕೂ ತರುತ್ತೇವೆ ಎಂದು ತಿಳಿಸಿದ್ದಾರೆ. ಈಶ್ವರಪ್ಪ ಯಾವುದೇ ಸ್ಥಾನವನ್ನು ಬೇಡಿ ಪಡೆಯುವುದಲ್ಲ. ಬಿಜೆಪಿ ನಾಯಕರೇ ಅವರಿಗೆ ಸೂಕ್ತ ಸ್ಥಾನವನ್ನು ನೀಡಬೇಕಿರುವುದು ಕರ್ತವ್ಯ. ಸಿಎಂ ಸ್ಥಾನದ ಗೊಂದಲ ಮುಗಿದಿರುವುದರಿಂದ ಈಶ್ವರಪ್ಪನವರಿಗೆ ಡಿಸಿಎಂ ಹುದ್ದೆಯನ್ನಾದರೂ ನೀಡಬೇಕು ಎಂದು ಸೋಮಲಿಂಗೇಶ್ವರ ಶ್ರೀ ಒತ್ತಾಯಿಸಿದ್ದಾರೆ.