ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಬೇನಾಮಿ ಆಸ್ತಿ ಹೊಂದಿದ್ದು, ಲೂಟಿ ರವಿ ಎಂದು ಕರೆದಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗೆ ಸಿ.ಟಿ. ರವಿ ಲೀಗಲ್ ನೋಟೀಸ್ ನೀಡಿದ್ದಾರೆ.
ನೋಟೀಸ್ ತಲುಪಿದ 48 ಗಂಟೆಯೊಳಗೆ ಕ್ಷಮೆಯಾಚಿಸಿ ಆರೋಪ ಹಿಂಪಡೆಯಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಿ.ಟಿ. ರವಿ ಎಚ್ಚರಿಸಿದ್ದಾರೆ.
BIG NEWS: ‘ದನಕ್ಕೆ ಇಂಜಕ್ಷನ್ ಕೊಡುವ ನೀನು ದನ ಕಾಯೋಕೆ ಹೋಗು’; ತಾಲೂಕು ಪಂಚಾಯತ್ EOಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೆಚ್.ಡಿ.ರೇವಣ್ಣ
ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದ ಎಂ. ಲಕ್ಷ್ಮಣ್, ಸಿ.ಟಿ. ರವಿ 500 ಎಕರೆ ಬೇನಾಮಿ ಆಸ್ತಿ ಹೊಂದಿದ್ದಾರೆ. ಸಿ.ಟಿ. ರವಿ ಬಾವ ಸುದರ್ಶನ ಹೆಸರಲ್ಲಿ ಜಮೀನು ಇದೆ. ಚಿಕ್ಕಮಗಳೂರಿನ ಎಲ್ಲಾ ಗುತ್ತಿಗೆ ಕೆಲಸ ಮಾಡುವವರು ಸುದರ್ಶನ್. 360 ಕೋಟಿ ರೂ. ಮೆಡಿಕಲ್ ಕಾಲೇಜು ಕೆಲಸ ಮಾಡಿಸುತ್ತಿರುವವರೂ ಅವರೇ. 60 ಕಿ.ಮೀ ರಸ್ತೆ ಕಾಮಗಾರಿ ಗುತ್ತಿಗೆ ನೀಡಿರುವುದೂ ಅವರ ಭಾವನಿಗೆ. ಹೀಗಿದ್ದೂ ನಮ್ಮ ನಾಯಕರ ವಿರುದ್ಧ ಆರೋಪ ಮಾಡುತ್ತಾ ತಾವು ಸತ್ಯ ಹರಿಶ್ಚಂದ್ರನ ಮೊಮ್ಮಗನಂತೆ ಮಾತನಾಡ್ತಾರೆ ಎಂದು ಗುಡುಗಿದ್ದರು.
ತಮಗೆ ನೀಡೀರುವ ನೋಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಲಕ್ಷ್ಮಣ್, ನಾನು ಬಹಿರಂಗವಾಗಿ ಕ್ಷಮೆಯಾಚಿಸುವ ಪ್ರಶ್ನೆ ಉದ್ಭವಿಸಲ್ಲ. ಸಿ.ಟಿ. ರವಿ ನೋಟೀಸ್ ಗೆ ಕಾನೂನು ಮೂಲಕ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.