alex Certify BIG NEWS: ಕೆಂಪಯ್ಯ ಸೇರಿ 18 ಜನರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ; ನ್ಯಾಯಾಲಯದಲ್ಲಿಯೂ ಶೀಘ್ರ ಇತ್ಯರ್ಥ; ಎಚ್ಚರಿಕೆ ಕೊಟ್ಟ ಸಚಿವ ಮುನಿರತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆಂಪಯ್ಯ ಸೇರಿ 18 ಜನರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ; ನ್ಯಾಯಾಲಯದಲ್ಲಿಯೂ ಶೀಘ್ರ ಇತ್ಯರ್ಥ; ಎಚ್ಚರಿಕೆ ಕೊಟ್ಟ ಸಚಿವ ಮುನಿರತ್ನ

ಬೆಂಗಳೂರು: 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಮತ್ತೆ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ನನ್ನ ವಿರುದ್ಧ ಕೆಂಪಯ್ಯ ಕಮಿಷನ್ ಆರೋಪ ಮಾಡಿದ್ದಾರೆ. ನಾನು ಯಾವುದೇ ಕಮಿಷನ್ ಪಡೆದುಕೊಂಡಿಲ್ಲ. ಕೆಂಪಯ್ಯ ಸೇರಿ 18 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. 4 ತಿಂಗಳಲ್ಲಿ ಕೇಸ್ ಇತ್ಯರ್ಥ ಮಾಡಬೇಕು ಎಂದು ಕೋರ್ಟ್ ಗೆ ಮನವಿ ಮಾಡುತ್ತೇನೆ ಎಂದರು.

ಕಮಿಷನ್ ಪಡೆದ ಬಗ್ಗೆ ದಾಖಲೆಗಳಿದ್ದರೆ ವಿಪಕ್ಷ ನಾಯಕರು ಬಿಡುಗಡೆ ಮಾಡಲಿ, ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಿ. ದಾಖಲೆ ಇಟ್ಟು ಮಾತನಾಡಿದರೆ ವಿಪಕ್ಷಗಳ ಘನತೆ ಹೆಚ್ಚಾಗುತ್ತೆ. ನಾನು ತಪ್ಪು ಮಾಡಿದರೆ ನನಗೆ ಶಿಕ್ಷೆಯಾಗಲಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...