alex Certify BIG NEWS: ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದ ಯತ್ನಾಳ್; ಅದೇನು ರಹಸ್ಯ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದ ಯತ್ನಾಳ್; ಅದೇನು ರಹಸ್ಯ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ HDK

ಅನುಶ್ರೀ ವಿಚಾರದಲ್ಲಿ ಕೇಳಿ ಬಂದ ಆ ಮಾಜಿ ಸಿಎಂ ಯಾರು, ಹೆಸರು ಹೇಳಿ...? ಹೆಚ್.ಡಿ ಕುಮಾರಸ್ವಾಮಿ ಒತ್ತಾಯ... - Just Kannada | Online Kannada News | Breaking Kannada News | Karnataka News | Live Updates ...

ವಿಜಯಪುರ: ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಅಖಾಡ ರಾಜಕೀಯ ನಾಯಕರ ಪರಸ್ಪರ ವೈಯಕ್ತಿಕ ಟೀಕೆ, ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗುತ್ತಿದೆ.

ಹಾರುತ್ತಿದ್ದ ವಿಮಾನದಿಂದ ಉದ್ಯಾನವನದಲ್ಲಿ ಬಿತ್ತು ಮಲ..!

ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಹಿರಂಗ ಸಾವಾಲು ಹಾಕಿರುವ ಹೆಚ್.ಡಿ.ಕುಮಾರಸ್ವಾಮಿ ಅದೇನು ರಹಸ್ಯ ಎಂಬುದನ್ನು ಹೊರತರಲಿ ಎಂದಿದ್ದಾರೆ.

ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಯತ್ನಾಳ್, ಕುಮಾರಸ್ವಾಮಿ ಪುಣ್ಯಾತ್ಮ ಏನ್ ಮಾತಾಡ್ತಾರೋ ಯಾರ್ಯಾರನ್ನು ಬೈತಾರೋ ಗೊತ್ತಿಲ್ಲ. ಅವರ ರಹಸ್ಯವೇ ನನ್ನ ಬಳಿ ಇದೆ. ಅದನ್ನು ಬಾಯ್ಬಿಟ್ಟರೆ ಅದು ಬೇರೆಯದೇ ಆಗುತ್ತೆ ಎಂದು ಹೇಳಿದ್ದರು.

ಪ್ರಿಪೇಯ್ಡ್ ಪ್ಲಾನ್‌ ಗಳ ಬೆಲೆಯಲ್ಲಿ ಇಳಿಕೆ ಮಾಡಿದ ಬಿಎಸ್ಎನ್ಎಲ್

ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಇವರಿಗೆ ನನ್ನ ಬಗ್ಗೆ ಏನೇನ್ ಗೊತ್ತಿದೆ ಅದೆಲ್ಲವನ್ನು ಬಹಿರಂಗ ಮಾಡಲಿ. ಅವರು ಸ್ವಲ್ಪ ವರ್ಷ ನಮ್ಮಜೊತೆಗಿದ್ದರು. 2-3 ವರ್ಷ ಯತ್ನಾಳ್ ಜೆಡಿಎಸ್ ನಲ್ಲಿದ್ದರು. ಅದಕ್ಕಾಗಿ ನನ್ನ ಬಗ್ಗೆ ಇವರಿಗೆ ಗೊತ್ತಿದ್ದರೆ ಆ ಚರಿತ್ರೆಯನ್ನು ಅವರು ಹೊರತರಲಿ ಎಂದು ಸವಾಲು ಹಾಕಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...