ಬೆಂಗಳೂರು: ಬರ್ತ್ ಡೇ ಪಾರ್ಟಿಗೆಂದು ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಜಕ್ಕಲಮಡಗು ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ರೋಹಿತ್ ಮೃತ ದುರ್ದೈವಿ. ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ತೆರಳಿದ್ದ ರೋಹಿತ್ ತನ್ನ ಐದು ಜನ ಸ್ನೇಹಿತರೊಂದಿಗೆ ಟ್ರಿಪ್ ಗೆ ತೆರಳಿದ್ದ. ಭರ್ಜರಿ ಟ್ರಿಪ್, ಗುಂಡು, ತುಂಡಿನ ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಂಡಿದ್ದ.
ಧೋನಿ – ಕೊಹ್ಲಿ ನಡುವಿನ ವಿಶೇಷ ಬಾಂಡ್ ಕಂಡು ಅಭಿಮಾನಿಗಳು ಫುಲ್ ಖುಷ್..!
ವಾಪಸ್ ಬೆಂಗಳೂರಿಗೆ ಬರುವಾಗ ಚಿಕ್ಕಬಳ್ಳಾಪುರದ ಬಳಿಯ ಜಕ್ಕಲಮಡಗು ಜಲಾಶಯದ ಬಳಿ ಮತ್ತೆ ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ಸ್ನೇಹಿತರೊಂದಿಗೆ ತೊಡಗಿದ್ದ. ಸೆಲ್ಫೀ ಕ್ರೇಜ್ ಗಾಗಿ ಕುಡಿದ ಅಮಲಿನಲ್ಲಿ ಎಲ್ಲರೂ ಮರವೇರಿ ಹುಚ್ಚಾಟ ನಡೆಸಿದ್ದಾರೆ.
ಈ ವೇಳೆ ಜಲಾಶಯದ ಹಿನ್ನೀರಿನಲ್ಲಿ ಸ್ನೇಹಿತರು ಈಜಲು ನೀರಿಗಿಳಿದಿದ್ದಾರೆ. ಈಜು ಬಾರದ ರೋಹಿತ್ ಕೂಡ ನೀರಿಗಿಳಿದಿದ್ದಾನೆ. ಈ ವೇಳೆ ಸ್ನೇಹಿತರ ಕಣ್ಣೆದುರೇ ಹಿನ್ನೀರಿನಲ್ಲಿ ಮುಳುಗಿ ರೋಹಿತ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್, ಗುಂಡು-ತುಂಡು ಪಾರ್ಟಿ, ಮೋಜು-ಮಸ್ತಿಗೆ ತೆರಳಿ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.