ಬೆಳಗಾವಿ: ಆರ್.ಎಸ್.ಎಸ್. ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಸಚಿವ ಮುರುಗೇಶ್ ನಿರಾಣಿ, ಓರ್ವ ಮಾಜಿ ಸಿಎಂ ಆಗಿ, ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಹೀಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಂತಹ ಮಾತುಗಳನ್ನಾಡುವುದು ಸರಿಯಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸೇವೆ ಇದೆ. ಆರ್.ಎಸ್.ಎಸ್. ನ ನಿಸ್ವಾರ್ಥ ಸೇವೆ ಬಗ್ಗೆ ಸ್ವಲ್ಪನಾದರೂ ಅರಿವು ಹೊಂದಲಿ ಎಂದು ಹೇಳಿದರು.
ಚಿಟ್ಟೆ ಮತ್ತು ಪೆಂಗ್ವಿನ್ ಕ್ಯೂಟ್ ಫ್ರೆಂಡ್ಶಿಪ್: ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು
ಆರ್.ಎಸ್.ಎಸ್. ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಆರ್.ಎಸ್.ಎಸ್. ನವರು ಎಂದೂ ಎಂ ಎಲ್ ಸಿ, ಎಂಪಿ, ಮುಖ್ಯಮಂತ್ರಿಗಳಾಗಬೇಕು ಎಂದು ಕನಸು ಕಂಡವರಲ್ಲ. ಅನ್ಯಾಯಕ್ಕೊಳಗಾದ ಜನರ ಜತೆ ಆರ್.ಎಸ್.ಎಸ್. ಸದಾ ನಿಲ್ಲುತ್ತದೆ. ಹಾಗಾಗಿ ಕಾಂಗ್ರೆಸ್ ನಾಯಕರಿಗೆ ಆರ್.ಎಸ್.ಎಸ್. ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಹೆಡ್ಗೆವಾರ್ ಬಗ್ಗೆ ಮಾತನಾಡುತ್ತಿದ್ದಾರೆ. ಹೆಡ್ಗೆವಾರ್ ಬಗ್ಗೆ ಓದಿದರೆ ಕಾಂಗ್ರೆಸ್ ನವರೂ ಬಿಜೆಪಿಗೆ ಬರ್ತಾರೆ. ಹಾಗಾಗಿ ಕಾಂಗ್ರೆಸ್ ನವರು ಸ್ವಲ್ಪ ಆರ್.ಎಸ್.ಎಸ್. ಬಗ್ಗೆ ಅಭ್ಯಾಸ ಮಾಡಲಿ. ಆಗ ಮನಸ್ಸು ಪರಿವರ್ತನೆಯಾಗುತ್ತದೆ ಎಂದು ಹೇಳಿದರು.