ದಾವಣಗೆರೆ: ಕಾಂಗ್ರೆಸ್ ಸ್ವತಂತ್ರ ಚಳುವಳಿ ಮೇಲೆ ರಾಜಕಾರಣ ಮಾಡಿತು. ಕಾಂಗ್ರೆಸ್ ಗೆ ವೈಚಾರಿಕತೆಯಾಗಲಿ, ಸಿದ್ಧಾಂತಗಳಾಗಲಿ, ದೇಶದ ಬಗ್ಗೆ ನಿಖರ ನಿರ್ಣಯಗಳಾಗಲಿ ಇಲ್ಲ, ಅದಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ನ್ನು ವಿಸರ್ಜಿಸಲು ಹೇಳಿದ್ದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರು ತೋರಿಕೆಗಾಗಿ ಗಾಂಧಿ ಸಿದ್ಧಾಂತವನ್ನು ಇಟ್ಟುಕೊಂಡರು. ಇಷ್ಟು ವರ್ಷಗಳ ಕಾಲ ಧ್ವಂದ್ವದಲ್ಲಿ ನಮ್ಮ ದೇಶವನ್ನು ಆಳಿದರು. ದೇಶವನ್ನು ದ್ವಂದ್ವದಲ್ಲಿಟ್ಟು ಪ್ರಜಾಪ್ರಭುತ್ವ ಕಾಪಾಡದ ಕಾರಣ ಈಗ ನಾವು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
50 ರೂಪಾಯಿಗೆ ಪ್ಲಾಸ್ಟಿಕ್ ʼಆಧಾರ್ʼ ಪಡೆಯಲು ಇಲ್ಲಿದೆ ಮಾಹಿತಿ
ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ನೀಡಿದವರೇ ಕಾಂಗ್ರೆಸ್ಸಿಗರು. ಅವರ ದ್ವಂದ್ವ ದೇಶಕ್ಕೆ ಹಾನಿಯಾಗಿದೆ. ವಾಮ ಮಾರ್ಗದಿಂದ ಕುಟಿಲ ರಾಜಕಾರಣ ಮಾಡಿ ಬೇರೆ ಪಕ್ಷಗಳು ಯಶಸ್ವಿಯಾಗದಂತೆ ಮಾಡಿದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದೂ ಅವರೇ, ಖಾಸಗೀಕರಣ ಮಾಡಿದ್ದೂ ಅವರೇ. ಇದೇ ಕಾರಣಕ್ಕಾಗಿ ದೇಶವನ್ನು ಪಾರು ಮಾಡಲು ರಾಷ್ಟ್ರದಲ್ಲಿ ಬಿಜೆಪಿಯನ್ನು ಹುಟ್ಟುಹಾಕಲಾಯಿತು. ದೇಶಭಕ್ತಿ, ವೈಚಾರಿಕತೆ, ಸಿದ್ಧಾಂತಗಳ ಮೇಲೆ, ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವ ಆಡಳಿತ ನೀಡುವ ನಿಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ಹೇಳಿದರು.
ಜನಪರ ಆಡಳಿತ ಬಿಜೆಪಿ ಉದ್ದೇಶ. ಜನರ ಮನಸ್ಸಿಗೆ ತಲುಪುವ ಕೆಲಸ ಮಾಡುವ ನಾಯಕತ್ವ ಹೊಂದಿರುವ ಪ್ರಧಾನಿ ಮೋದಿ ನಮಗೆ ದೊರಕಿದ್ದಾರೆ. ಇಡೀ ವಿಶ್ವದಲ್ಲೇ ಬಿಜೆಪಿ ಇಂದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪರಿಪಕ್ವ ನಾಯಕತ್ವ ಎಂಬುದು ಇದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ನೀಡಿರುವ ಪಕ್ಷ ಬಿಜೆಪಿ. ಬಿಜೆಪಿ ಕಟ್ಟಿ ಬೆಳೆಸಿದ ಬಿ ಎಸ್ ವೈ ನಮಗೆ ಸಾಕ್ಷಿ. ಸ್ಟ್ರಾಂಗ್ ಸೆಂಟರ್, ಸ್ಟ್ರಾಂಗ್ ಸ್ಟೇಟ್ ಇದು ಬಿಜೆಪಿಯಲ್ಲಿ ಮಾತ್ರ ಕಾಣಸಿಗುತ್ತದೆ. ಕಾಂಗ್ರೆಸ್ ನಲ್ಲಿ ಕೇಂದ್ರವೂ ವೀಕ್, ರಾಜ್ಯವೂ ವೀಕ್ ಆಗಿದೆ ಎಂದು ಟೀಕಿಸಿದ್ದಾರೆ.