alex Certify BIG NEWS: ಕಮೀಷನ್ ಭಾರಕ್ಕೆ ಕುಸಿದ ನಿರ್ಮಾಣ ಹಂತದ ಕಾಮಗಾರಿ; ಇದು ಸಿಎಂ ಬೊಮ್ಮಾಯಿ ಅವರ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕ; ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಮೀಷನ್ ಭಾರಕ್ಕೆ ಕುಸಿದ ನಿರ್ಮಾಣ ಹಂತದ ಕಾಮಗಾರಿ; ಇದು ಸಿಎಂ ಬೊಮ್ಮಾಯಿ ಅವರ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕ; ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: 40% ಕಮೀಷನ್ ಭಾರಕ್ಕೆ ನಿರ್ಮಾಣ ಹಂತದ ಕಾಮಗಾರಿಗಳು ಕುಸಿದು ಬೀಳುತ್ತಿದ್ದು, ಪೇಸಿಎಂ ಎಂದಾಕ್ಷಣ ಉರಿದುರಿದು ಬೀಳುವ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ, ಇದನ್ನು ನಿಮ್ಮ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕವನ್ನಾಗಿ ಮಾಡಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಹೈಕಮಾಂಡಿಗೆ ಕಾಣಿಕೆ ಕೊಡುವುದು ಬಿಜೆಪಿಯಲಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಅವರದೇ ಪಕ್ಷದ ಶಾಸಕರು “ದಿಲ್ಯಾಗೆ ರೊಕ್ಕ ಕೊಟ್ಟಕೊಂಡ ಬಂದಾರ ಬಿಜೆಪಿನ್ಯಾಗೆ” ಎಂದು ನೇರವಾಗಿ ಆರೋಪಿಸಿದ್ದಾರೆ, ಯತ್ನಾಳ್ ಹೇಳಿಕೆ ಬಗ್ಗೆ ಮಾತಾಡುವ ಧೈರ್ಯವಿದೆಯೇ?

ರೊಕ್ಕ ಕೊಟ್ಟಿದ್ದನ್ನ ತನಿಖೆ ಮಾಡಲಿ ಎಂಬ ಯತ್ನಾಳ್‌ರ ಸವಾಲು ಸ್ವೀಕಸರಿಸುವ ದಮ್ಮು ತಾಕತ್ತು ಇದೆಯೇ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...