alex Certify BIG NEWS: ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಔಟ್​ – ಟಾಟಾ ಕಂಪನಿಗೆ ಟೈಟಲ್​ ಸ್ಪಾನ್ಸರ್​ಶಿಪ್​ ಪಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಔಟ್​ – ಟಾಟಾ ಕಂಪನಿಗೆ ಟೈಟಲ್​ ಸ್ಪಾನ್ಸರ್​ಶಿಪ್​ ಪಟ್ಟ

ಮುಂದಿನ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯಕ್ಕೆ ಟೈಟಲ್​ ಸ್ಪಾನ್ಸರ್​ ಆಗಿ ಚೀನಾದ ಮೊಬೈಲ್​ ತಯಾರಕ ಕಂಪನಿ ವಿವೋ ಬದಲಿಗೆ ಟಾಟಾ ಗ್ರೂಪ್​ ಇರಲಿದೆ ಎಂದು ಇಂಡಿಯನ್​ ಪ್ರೀಮಿಯರ್​ ಲೀಗ್​ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಅಧಿಕೃತ ಮಾಹಿತಿ ನೀಡಿದ್ದಾರೆ.

ವಿವೋ ಕಂಪನಿಯು ಇಂಡಿಯನ್​ ಪ್ರೀಮಿಯರ್​ ಲೀಗ್​ನೊಂದಿಗೆ ತನ್ನ ಪ್ರಾಯೋಜಕತ್ವದ ಒಪ್ಪಂದದಲ್ಲಿ ಇನ್ನೂ ಎರಡು ವರ್ಷ ಬಾಕಿ ಉಳಿದಿದೆ. ಹೀಗಾಗಿ ಈ ಅವಧಿಯಲ್ಲಿ ಟಾಟಾ ಐಪಿಎಲ್​ನ ಮುಖ್ಯ ಪ್ರಾಯೋಜಕವಾಗಿ ಇರಲಿದೆ. ಇಂದು ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಆಡಳಿತ ಮಂಡಳಿಯ ಸಭೆಯ ಬಳಿಕ ಔಪಚಾರಿಕ ಒಪ್ಪಂದವನ್ನು ನೀಡಲಾಗಿದೆ.

ಐಪಿಎಲ್​ನಲ್ಲಿ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಳ್ಳಲು ವಿವೋ 2018 ರಿಂದ 2022ರ ಅವಧಿಗೆ ಬರೋಬ್ಬರಿ 200 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ 2022ರಲ್ಲಿ ಗಾಲ್ವಾನ್​ ವ್ಯಾಲಿ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಗಡಿ ಸಂಘರ್ಷ ಏರ್ಪಟ್ಟಿತ್ತು. ಹೀಗಾಗಿ 1ವರ್ಷಗಳ ಕಾಲ ವಿವೋ ಟೈಟಲ್​ ಸ್ಪಾನರ್​ಶಿಪ್​ನಿಂದ ವಿರಾಮ ಪಡೆದಿತ್ತು. ಈ ವೇಳೆಯಲ್ಲಿ ವಿವೋ ಸ್ಥಾನವನ್ನು ಡ್ರೀಮ್​ 11 ತುಂಬಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...