ಬೆಂಗಳೂರು: ಕಂಬಳಿ ನೇಯುವವರು ಸಿಎಂ ಬೊಮ್ಮಾಯಿ ಸಮುದಾಯದವರಾ? ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಎಲ್ಲಾ ಕಸುಬುದಾರರೂ ನನ್ನ ಸಮುದಾಯದವರೇ, ನಮ್ಮವರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಹಾನಗಲ್ ನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರತಿಯೊಂದು ಸಮುದಾಯದ ಜನರು, ಎಲ್ಲಾ ಕಸುಬುದಾದರರನ್ನೂ ನಮ್ಮ ಜನರು ಎಂದು ಭಾವಿಸಿದ್ದೇನೆ. ಕೇವಲ ಕಂಬಳಿ ನೇಯುವವರು ಮಾತ್ರವಲ್ಲ. ಕಂಬಳಿ ವಿಚಾರವನ್ನು ಸಿದ್ದರಾಮಯ್ಯ ಬಹಳ ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ ಎಂದರು.
ಅತ್ಯಾಚಾರ ಆರೋಪ ಹೊತ್ತಿದ್ದ ಕಾಂಗ್ರೆಸ್ ಶಾಸಕನ ಪುತ್ರ ಕೊನೆಗೂ ಅರೆಸ್ಟ್
ಕಂಬಳಿಯನ್ನು ಕುರುಬರು ನೇಯುತ್ತಾರೆ. ಸಿಎಂ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ? ಕುರುಬರು ನೇಯುತ್ತಾರೆ ಅಂದಮೇಲೆ ಗೌರವ, ಶ್ರಮ ಯಾರಿಗೆ ಕುರುಬರಿಗೆ… ಕಂಬಳಿ ಹಾಕಿಕೊಂಡ ಮಾತ್ರಕ್ಕೆ ಗೌರವ ಬಂದುಬಿಡಲ್ಲ ಎಂದು ಸಿದ್ದರಾಮಯ್ಯ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಒಂದು ಸಮುದಾಯ ಮಾತ್ರವಲ್ಲ ರಾಜ್ಯದ ಮುಖ್ಯಮಂತ್ರಿ ಎಂದ ಮೇಲೆ ಎಲ್ಲಾ ಸಮುದಾಯದವರೂ ನಮ್ಮವರೇ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.