alex Certify BIG NEWS: ಉದ್ಯಮಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉದ್ಯಮಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಮೂವರು ಅರೆಸ್ಟ್

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದ್ದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿಯ ಹತ್ಯೆಗೆ 2ನೇ ಪತ್ನಿಯೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮೃತ ಉದ್ಯಮಿ ಪತ್ನಿ ಕಿರಣಾ, ಧರ್ಮೇಂದ್ರ, ಶಶಿಕಾಂತ್ ಎಂಬ ಮೂವರು ಆರೋಪಿಗಳನ್ನು ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 15 ರಂದು ಉದ್ಯಮಿ ರಾಜು ದೊಡ್ಡಬಣ್ಣವರ್ ಹತ್ಯೆಯಾಗಿದ್ದರು. ರಾಜು ಗೆ ಮೂವರು ಪತ್ನಿಯರಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ರಾಜುವಿನ 2ನೇ ಪತ್ನಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ರಾಜು ಪತ್ನಿ ಕಿರಣಾ, ತನ್ನ ಪತಿಯ ಬ್ಯುಸಿನೆಸ್ ಪಾರ್ಟನರ್ ಗೆ 10 ಲಕ್ಷ ರೂಪಾಯಿಗೆ ಪತಿ ಹತ್ಯೆಗೆ ಸುಪಾರಿ ಕೊಟಿದ್ದಳು ಎಂಬ ಅಂಶ ಬಯಲಾಗಿದೆ. ಪತಿ ಹಾಗೂ ಪತ್ನಿ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣದಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...