alex Certify BIG NEWS: ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ವಿರುದ್ಧದ ತನ್ನ ಸ್ಪರ್ಧಿಯನ್ನು ಕಣದಿಂದ ಹಿಂಪಡೆದು ಅಚ್ಚರಿ ಮೂಡಿಸಿದ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ವಿರುದ್ಧದ ತನ್ನ ಸ್ಪರ್ಧಿಯನ್ನು ಕಣದಿಂದ ಹಿಂಪಡೆದು ಅಚ್ಚರಿ ಮೂಡಿಸಿದ ಬಿಜೆಪಿ

ನವೆಂಬರ್ 3 ರಂದು ನಡೆಯಲಿರುವ ಹೈ-ಪ್ರೊಫೈಲ್ ಅಂಧೇರಿ ಈಸ್ಟ್ ಉಪಚುನಾವಣೆಗೆ ಮುರ್ಜಿ ಪಟೇಲ್ ಅವರ ಉಮೇದುವಾರಿಕೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಹಿಂಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಪಟೇಲ್ ಅವರು ಬಿಜೆಪಿ ಮತ್ತು ಮುಖ್ಯಮಂತ್ರಿ‌ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯ ಜಂಟಿ ಅಭ್ಯರ್ಥಿಯಾಗಿದ್ದರು.

ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಮುರ್ಜಿ ಪಟೇಲ್ ಈಗ ಅದನ್ನು ಹಿಂಪಡೆಯುತ್ತಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಅಂಧೇರಿ ಕ್ಷೇತ್ರದಿಂದ ದಿವಂಗತ ರಮೇಶ್ ಲಾಟ್ಕೆ ಅವರ ಪತ್ನಿ ಋತುಜಾ ಲಾಟ್ಕೆ ಉದ್ದವ್‌ ಠಾಕ್ರೆ ನೇತೃತ್ವದ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬಿಜೆಪಿಯ ಈ ನಿರ್ಧಾರವನ್ನು ಲೇವಡಿ ಮಾಡಿರುವ ಉದ್ದವ್‌ ಠಾಕ್ರೆ ಬಣ, ಚುನಾವಣೆಗೂ ಮುನ್ನವೇ ಅವರುಗಳು ಸೋಲನ್ನೊಪ್ಪಿಕೊಂಡಿದ್ದಾರೆ. ಸೋಲಿನ ಭಯದಿಂದಲೇ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಪಡೆದಿದ್ದಾರೆ ಎಂದು ಹೇಳಿದೆ.

ಈ ಮೊದಲು ಟ್ವೀಟ್‌ ಮಾಡಿದ್ದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ, ಅಂಧೇರಿ ಕ್ಷೇತ್ರದಿಂದ ದಿವಂಗತ ರಮೇಶ್ ಲಾಟ್ಕೆ ಅವರ ಪತ್ನಿ ಕಣಕ್ಕಿಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕದೆ ಅವರನ್ನು ಬೆಂಬಲಿಸುವ ಮೂಲಕ ದಿವಂಗತ ಶಾಸಕರಿಗೆ ಗೌರವ ಸಲ್ಲಿಸಲಿ ಎಂದು ಹೇಳಿದ್ದರು.

— Priyanka Chaturvedi🇮🇳 (@priyankac19) October 17, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...