ಕೈವ್; ಮೂರು ದಶಕಗಳಿಂದ ಆರಂಭವಾಗಿದ್ದ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಇದೀಗ ರಣಭೀಕರ ಯುದ್ಧರೂಪ ಪಡೆದುಕೊಂಡಿದ್ದು, ರಷ್ಯಾ ದಾಳಿಗೆ ಉಕ್ರೇನ್ ನಲುಗಿದೆ. ಉಕ್ರೇನ್ ನ ಸೇನಾನೆಲೆ, ಏರ್ ಪೋರ್ಟ್ ಗಳ ಮೇಲೆ ದಾಳಿ ನಡೆಸಿರುವ ರಷ್ಯಾ ಮಿಲಿಟರಿಪಡೆ ಜನನಿಬಿಡ ಪ್ರದೇಶಗಳ ಮೇಲೂ ದಾಳಿಗೆ ಮುಂದಾಗಿದೆ.
ಕೈವ್, ಖಾರ್ಕಿವ್, ಮೌರಿಪೋಲ್, ಒಡೆಸ್ಸ ಸೇರಿದಂತೆ ಉಕ್ರೇನ್ ನ ಪ್ರಮುಖ ನಗರಗಳಲ್ಲಿ ರಷ್ಯಾ ಸೇನೆ ಬೀಡುಬಿಟ್ಟಿದ್ದು, ವಾಯುನೆಲೆಗಳನ್ನು ಛಿದ್ರಗೊಳಿಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ನ 40 ಯೋಧರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ.
BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!
ಈ ನಡುವೆ ತುರ್ತು ಸುದ್ದಿಗೋಷ್ಠಿ ನಡೆಸಿರುವ ಉಕ್ರೇನ್ ಅಧ್ಯಕ್ಷ, ರಷ್ಯಾ ದಾಳಿಗೆ ಪ್ರತಿದಾಳಿ ನಡೆಸಲಾಗಿದ್ದು, ರಷ್ಯಾದ 50 ಸೈನಿಕರನ್ನು ಹೊಡೆದುರುಳಿಸಿದ್ದೇವೆ. ಯಾವ ಕಾರಣಕ್ಕೂ ರಷ್ಯಾಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ರಷ್ಯಾ ವಿರುದ್ಧ ಬೀದಿಯಲ್ಲಿ ನಿಂತು ಹೋರಾಡುವವರಿಗೂ ಶಸ್ತ್ರಾಸ್ತ್ರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಯುದ್ಧಪೀಡಿತ ಉಕ್ರೇನ್ ನಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಎದುರಾಗುತ್ತಿದ್ದು, ರಾಜ್ಯದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.