ರಷ್ಯಾದ ಸೇನೆಯು ಉಕ್ರೇನ್ನ ಮೇಲೆ ದಾಳಿ ನಡೆಸಿದಾಗಿನಿಂದ ಉಕ್ರೇನ್ನ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಉಕ್ರೇನ್ ರಷ್ಯಾದ ಆಕ್ರಮಣಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದರೂ ಸಹ ದೈತ್ಯ ರಾಷ್ಟ್ರದ ಆಕ್ರಮಣವು ಉಕ್ರೇನ್ಗೆ ಭಾರೀ ಸಂಕಷ್ಟವನ್ನು ನೀಡುತ್ತಿದೆ.
ಈ ನಡುವೆ ಮಾರಿಯುಪೋಲ್ನ ಮೇಯರ್ ವಾಡಿಮ್ ಬೊಯಿಚೆಂಕೋ ರಷ್ಯಾದ ಪಡೆಗಳು ನಗರವನ್ನು ದಿಗ್ಭಂಧನ ಮಾಡಲು ಯತ್ನಿಸುತ್ತಿವೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥರು ಉಕ್ರೇನ್ನಲ್ಲಿ ಹತ್ತಾರು ಮಿಲಿಯನ್ ಜನರು ಮಾರಣಾಂತಿಕ ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮಗೆ ವಿದ್ಯುತ್ ಇಲ್ಲ, ನೀರು ಪೂರೈಕೆ ಇಲ್ಲ, ನಮಗೆ ವ್ಯವಸ್ಥೆ ಕೂಡ ಸರಿಯಾಗಿ ಸಿಗುತ್ತಿಲ್ಲ. ರಷ್ಯಾದವರು ನಮ್ಮ ನಗರವನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದಾರೆ ಎಂದು ವಿಡಿಯೋ ಸಂದರ್ಶನದಲ್ಲಿ ವಾಡಿಮ್ ಬೊಯಿಚೆಂಕೋ ಹೇಳಿದ್ದಾರೆ.