ಕೀವ್: ಉಕ್ರೇನ್ ಮೇಲೆ ರಷ್ಯಾ ಸಮರ ಬೆನ್ನಲ್ಲೇ ಇದೀಗ ಉಕ್ರೇನ್ ಗೆ ಮತ್ತೊಂದು ಆತಂಕ ಎದುರಾಗಿದ್ದು, ಚೆರ್ನೋಬಿಲ್ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆಯಾಗುವ ಭೀತಿ ಎದುರಾಗಿದೆ.
ರಷ್ಯಾ ಇಂದು ಬೆಳಿಗ್ಗೆ ಉಕ್ರೇನ್ ನ ಅಣುವಿದ್ಯುತ್ ಸ್ಥಾವರ ಚೆರ್ನೋಬಿಲ್ ನ್ನು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಅಲ್ಲಿನ ಸಿಬ್ಬಂದಿಗಳನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಚೆರ್ನೋಬಿಲ್ ಅಣುಸ್ಥಾವರದಲ್ಲಿ ವಿಕಿರಣ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ವಿಕಿರಣ ಸೋರಿಕೆಯಾಗುವ ಭೀತಿ ಎದುರಾಗಿದೆ ಎಂದು ಉಕ್ರೇನ್ ನ್ಯೂಕ್ಲಿಯರ್ ಏಜೆನ್ಸಿ ಆತಂಕ ವ್ಯಕ್ತಪಡಿಸಿದೆ.
ʼಅಪ್ಪ – ಅಮ್ಮ ಐ ಲವ್ ಯೂʼ ಯುದ್ದಕ್ಕೆ ತೆರಳುವ ಮುನ್ನ ಉಕ್ರೇನ್ ಸೈನಿಕನ ಭಾವನಾತ್ಮಕ ಸಂದೇಶ; ವಿಡಿಯೋ ನೋಡಿ ಕಣ್ಣೀರಾದ ನೆಟ್ಟಿಗರು
1986ರಲ್ಲಿ ಒಮ್ಮೆ ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತ ಇದೇ ಚೆರ್ನೋಬಿಲ್ ನಲ್ಲಿ ಸಂಭವಿಸಿತ್ತು. ಸಾವಿರಾರು ಜನ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ದುರಂತದ ಬಳಿಕ ವಿಕಿರಣ ತ್ಯಾಜ್ಯವನ್ನು ರಕ್ಷಣಾತ್ಮಕ ಕ್ರಮಗಳಿಂದ ಮುಚ್ಚಲ್ಪಟ್ಟಿತ್ತು. ಇದೀಗ ರಷ್ಯಾ ಸೇನೆ ಚೆರ್ನೋಬಿಲ್ ವಶಕ್ಕೆ ಪಡೆದುಕೊಂಡ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ 1986ರ ದುರಂತ ಮರುಕಳಿಸದಂತೆ ನಮ್ಮ ಸೇನಾ ಪಡೆಗಳು ಹೋರಾಟ ನಡೆಸಿವೆ ಎಂದು ತಿಳಿಸಿದ್ದರು. ಆದರೆ ಇದೀಗ ರಷ್ಯಾ ಚೆರ್ನೊಬಿಲ್ ವಶಕ್ಕೆ ಪಡೆದುಕೊಂಡಿದ್ದು, ಉಕ್ರೇನ್ ನಾದ್ಯಂತ ಆತಂಕದ ವಾತಾವರಣ ಇಮ್ಮಡಿಗೊಂಡಿದೆ.