alex Certify BIG NEWS: ಇಬ್ಬರು PDOಗಳು ಲೋಕಾಯುಕ್ತ ಬಲೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಬ್ಬರು PDOಗಳು ಲೋಕಾಯುಕ್ತ ಬಲೆಗೆ

ಬಾಗಲಕೋಟೆ: ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಪಿಡಿಒಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬೇವಿನಕಟ್ಟೆ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಕಾಂತ ತಿಮ್ಮಾಪುರೆ ಹಾಗೂ ರಾಂಪುರ ಗ್ರಾಮ ಪಂಚಾಯಿತಿ ಪಿಡಿಒ ಮುದಕಪ್ಪ ತೇಜಿ ಲೋಕಾಯುಕ್ತ ಬಲೆಗೆ ಬಿದ್ದವರು.

ಎನ್ ಎ ಫ್ಲ್ಯಾಟ್ ಎಂಟ್ರಿ ಮಾಡಿಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೊನ್ನಾಕಟ್ಟೆಯ ವಾಸು ಜಾಧವ್ ಎಂಬುವವರಿಂದ ಹಣ ಪಡೆಯುತ್ತಿದ್ದಾಗ ಇಬ್ಬರು ಪಿಡಿಒಗಳು ಸಿಕ್ಕಿ ಬಿದ್ದಿದ್ದಾರೆ.

ಬಾಗಲಕೋಟೆ ಲೋಕಾಯುಕ್ತ ಡಿವೈ ಎಸ್ ಪಿ ಪುಷ್ಪಲತಾ ಹಾಗೂ ಸಿಪಿಐ ಮಲ್ಲಪ್ಪ ಬಿದರಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಪಿಡಿಒಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...