alex Certify BIG NEWS: ಆರೋಗ್ಯ ಇಲಾಖೆಯಲ್ಲಿ 3 ಸಾವಿರ ಕೋಟಿ ಅವ್ಯವಹಾರ; ಆಲಿಬಾಬ & 40 ಜನ ಕಳ್ಳರ ಗುಂಪಲ್ಲಿ ಸಚಿವ ಸುಧಾಕರ್ ಕೂಡ ಒಬ್ಬ ಸದಸ್ಯ; ಸಿದ್ದರಾಮಯ್ಯ ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆರೋಗ್ಯ ಇಲಾಖೆಯಲ್ಲಿ 3 ಸಾವಿರ ಕೋಟಿ ಅವ್ಯವಹಾರ; ಆಲಿಬಾಬ & 40 ಜನ ಕಳ್ಳರ ಗುಂಪಲ್ಲಿ ಸಚಿವ ಸುಧಾಕರ್ ಕೂಡ ಒಬ್ಬ ಸದಸ್ಯ; ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು: ದುಡ್ದಿನ ಆಸೆಗೆ ಬಿಜೆಪಿ ಸೇರಿ ಸುಧಾಕರ್ ಮಂತ್ರಿಯಾಗಿದ್ದಾರೆ. ಸಚಿವರಾದ ಸುಧಾಕರ್ ಹಾಗೂ ಅಶ್ವತ್ಥನಾರಾಯಣ ಮೂಲಕ ಸಿಎಂ ಬೊಮ್ಮಾಯಿ ಸುಳ್ಳು ಹೇಳಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸುಧಾಕರ್ ಗೆ ನಮ್ಮ ಪಕ್ಷವೇ ರಾಜಕೀಯ ಜೀವನ ಕೊಟ್ಟಿದ್ದು. ನಮ್ಮ ವಿರುದ್ಧ ಸುಧಾಕರ್ 35 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪಿಸಿದ್ದಾರೆ. ಪಾಪ ಸುಧಾಕರ್ ಗೆ ಸಿಎಜಿ ವರದಿ ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದು ಗುಡುಗಿದರು.

ಕೋವಿಡ್ ಸಮಯದಲ್ಲಿ ಹಣ ಹೊಡೆದಿದ್ದಕ್ಕೆ ಮಾಸ್ಟರ್ ಇವರೇ. ಕೊರೊನಾ ಟೈಂ ನಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ. ಆರೋಗ್ಯ ಇಲಾಖೆಯಲಿ 3 ಸಾವಿರ ಕೋಟಿ ಹಗರಣ ಆದ ವರದಿ ಇದೆ. ಆಲಿಬಾಬ & 40 ಜನ ಕಳ್ಳರ ಗುಂಪಿನಲ್ಲಿ ಸುಧಾಕರ್ ಕೂಡ ಸದಸ್ಯ ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...