alex Certify BIG NEWS: ಆಭರಣ ಪ್ರಿಯರು ನಿರಾಳ; ತಟಸ್ಥವಾಗಿದೆ ಚಿನ್ನದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಭರಣ ಪ್ರಿಯರು ನಿರಾಳ; ತಟಸ್ಥವಾಗಿದೆ ಚಿನ್ನದ ಬೆಲೆ

ಆಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿಯಿದೆ. ಚಿನ್ನದ ಬೆಲೆ ಕೊಂಚವೂ ಏರಿಕೆ ಕಂಡಿಲ್ಲ, ಆಭರಣ ಚಿನ್ನದ ದರ 10 ಗ್ರಾಂಗೆ 50 ಸಾವಿರಕ್ಕಿಂತಲೂ ಕಡಿಮೆಯೇ ಇದೆ. 22 ಕ್ಯಾರೆಟ್‌ ನ 10 ಗ್ರಾಂ ಬಂಗಾರದ ಬೆಲೆ ಈಗ 48,200 ರೂಪಾಯಿ.

ಆದ್ರೆ ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ಪ್ರಮಾಣ ಇರುವುದರಿಂದ ಚಿನ್ನದ ಬೆಲೆಯಲ್ಲಿ ಕೊಂಚ ಏರುಪೇರಾಗಬಹುದು. ದೆಹಲಿಯಲ್ಲಿ 22 ಕ್ಯಾರೆಟ್‌ ನ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ಇದ್ರೆ, ಚೆನ್ನೈನಲ್ಲಿ 48,440 ರೂಪಾಯಿ ಆಗಿದೆ.

ಬೆಂಗಳೂರು, ಕೇರಳ ಹಾಗೂ ಮುಂಬೈನಲ್ಲಿ 48,200 ರೂಪಾಯಿ ಇದೆ. ವಡೋದರಾದಲ್ಲಿ 48,250ರೂಪಾಯಿ, ಜೈಪುರ ಹಾಗೂ ಲಖ್ನೋದಲ್ಲಿ 10 ಗ್ರಾಂ ಬಂಗಾರದ ದರ 48,350 ರೂಪಾಯಿ ಆಗಿದೆ. ಅಹಮದಾಬಾದ್‌ ನಲ್ಲಿ ಬಂಗಾರದ ಬೆಲೆ 48,280 ರೂಪಾಯಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...