ಆಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿಯಿದೆ. ಚಿನ್ನದ ಬೆಲೆ ಕೊಂಚವೂ ಏರಿಕೆ ಕಂಡಿಲ್ಲ, ಆಭರಣ ಚಿನ್ನದ ದರ 10 ಗ್ರಾಂಗೆ 50 ಸಾವಿರಕ್ಕಿಂತಲೂ ಕಡಿಮೆಯೇ ಇದೆ. 22 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆ ಈಗ 48,200 ರೂಪಾಯಿ.
ಆದ್ರೆ ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ಪ್ರಮಾಣ ಇರುವುದರಿಂದ ಚಿನ್ನದ ಬೆಲೆಯಲ್ಲಿ ಕೊಂಚ ಏರುಪೇರಾಗಬಹುದು. ದೆಹಲಿಯಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ಇದ್ರೆ, ಚೆನ್ನೈನಲ್ಲಿ 48,440 ರೂಪಾಯಿ ಆಗಿದೆ.
ಬೆಂಗಳೂರು, ಕೇರಳ ಹಾಗೂ ಮುಂಬೈನಲ್ಲಿ 48,200 ರೂಪಾಯಿ ಇದೆ. ವಡೋದರಾದಲ್ಲಿ 48,250ರೂಪಾಯಿ, ಜೈಪುರ ಹಾಗೂ ಲಖ್ನೋದಲ್ಲಿ 10 ಗ್ರಾಂ ಬಂಗಾರದ ದರ 48,350 ರೂಪಾಯಿ ಆಗಿದೆ. ಅಹಮದಾಬಾದ್ ನಲ್ಲಿ ಬಂಗಾರದ ಬೆಲೆ 48,280 ರೂಪಾಯಿ ಇದೆ.