ಬಾಗಲಕೋಟೆ: ಕನ್ನಡದ ಕಬೀರ, ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಇಬ್ರಾಹಿಂ ಸುತಾರ್ ಇಂದು ಮುಂಜಾನೆ 6:30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸಾರಿಗೆ ಸಚಿವಾಲಯದಿಂದ ಶಾಕಿಂಗ್ ಮಾಹಿತಿ: ಶೇ. 70 ರಷ್ಟು ಹೆಚ್ಚಾಯ್ತು ಪಾದಚಾರಿಗಳ ಸಾವಿನ ಪ್ರಮಾಣ
ಹಿಂದೂ ಮುಸ್ಲೀಂ ಭಾವೈಕ್ಯತೆಯ ಪಾಠ ಸಾರಿದ್ದ ಇಬ್ರಾಹಿಂ ಸುತಾರ್, ಪ್ರವಚನಕ್ಕೆ ಹೆಸರಾಗಿದ್ದರಲ್ಲದೇ ಬಸವಣ್ಣನವರ ಅನುಯಾಯಿಯಾಗಿದ್ದರು.
1940 ಮೇ 10 ರಂದು ಜನಿಸಿದ್ದ ಇಬ್ರಾಹಿಂ ಸುತಾರ್, ಆರ್ಥಿಕ ಸಂಕಷ್ಟದಿಂದಾಗಿ ಕೇವಲ ಮೂರನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ನೇಕಾರ ವೃತ್ತಿ ಮಾಡುತ್ತಾ, ಕುರಾನ್, ಭಗವದ್ಗೀತೆ ಅಧ್ಯಯ ಮಾಡಿ, ಪ್ರವಚನಗಳನ್ನು ಮಾಡುತ್ತ ಸರ್ವಧರ್ಮ ಸಮಾನತೆ, ಭಾವೈಕ್ಯತೆಯ ಬಗ್ಗೆ ಸಾರುತ್ತಿದ್ದರು. 1995ರಲ್ಲಿ ರಾಜ್ಯ ಸರ್ಕಾರ ಇಬ್ರಾಹಿಂ ಸುತಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದೀಗ ಆಧುನಿಕ ಸೂಫಿ ಸಂತ ಎಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ್ ನಿಧನರಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.