ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಕ್ಸಮರ, ಆರೋಪ-ಪ್ರತ್ಯಾರೋಪಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಫೋನ್ ಕದ್ದಾಲಿಕೆವರೆಗೂ ಬಂದುನಿಂತಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಸುಮಲತಾ, ಮಠಾಧೀಶರ ಫೋನ್ ಗಳನ್ನೇ ಟ್ಯಾಪ್ ಮಾಡುವ ನಾಯಕರು ಅವರು ಇನ್ನು ನಾನು, ನೀವು ಯಾವ ಲೆಕ್ಕ? ಎಂದು ಪ್ರಶ್ನಿಸಿದ್ದಾರೆ.
ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ
ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಮಾತ್ರವಲ್ಲ ಆದಿಚುಂಚನಗಿರಿ ಮಠಾಧೀಶರ ಫೋನ್ ಟ್ಯಾಪ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ, ಸ್ಯಾಂಡಲ್ ವುಡ್ ಸ್ಮಗ್ಲರ್ಸ್ ಎಂಬ ಟ್ಯಾಗ್ ಕಾರಣ ಕೊಟ್ಟರು. ಒಂದು ಸಮುದಾಯದ ಪೂಜ್ಯ ಗುರುಗಳ, ದೇವರೆಂದು ಪೂಜಿಸುವ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿ ಅದಕ್ಕೆ ಇನ್ನೊಂದು ಹೆಸರುಕೊಟ್ಟು ಸಮರ್ಥಿಸಿಕೊಳ್ಳುವ ಇಂತವರಿಗೆ ನಮ್ಮ ಫೋನ್ ಕದ್ದಾಲಿಕೆ ಮಾಡುವುದು ಸುಲಭದ ಕೆಲಸ. ಸ್ವಲ್ಪನಾದರೂ ಭಯ-ಭಕ್ತಿ, ಮಾಡುತ್ತಿರುವ ಕೆಲಸದ ಪರಿಣಾಮಗಳನ್ನಾದರೂ ಯೋಚಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನನ್ನನ್ನು ಇಡೀ ಜೆಡಿಎಸ್ ಪಾಳಯ ಟಾರ್ಗೆಟ್ ಮಾಡುತ್ತಿರುವುದು ರಾಜ್ಯದ ಜನತೆ ನೋಡುತ್ತಿದ್ದಾರೆ. ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.