alex Certify BIG NEWS: ಆತ್ಮಹತ್ಯೆಗೆ ಶರಣಾದ 4 ತಿಂಗಳ ಗರ್ಭಿಣಿ; ಬಂಧನವಾಗುತ್ತಿದ್ದಂತೆ ಗಂಡನ ಒಂದೊಂದೇ ಅಸಲಿ ಮುಖ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆತ್ಮಹತ್ಯೆಗೆ ಶರಣಾದ 4 ತಿಂಗಳ ಗರ್ಭಿಣಿ; ಬಂಧನವಾಗುತ್ತಿದ್ದಂತೆ ಗಂಡನ ಒಂದೊಂದೇ ಅಸಲಿ ಮುಖ ಬಯಲು

ಬೆಳಗಾವಿ: ಪತಿಯ ಕಿರುಕುಳ ತಾಳಲಾರದೇ 4 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ ನಡೆದಿದೆ.

ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 8 ತಿಂಗಳ ಹಿಂದಷ್ಟೆ ಬೆಳಗಾವಿಯ ಶಹಾಪುರದ ಅಳವಣ ಗಲ್ಲಿಯ ನಿವಾಸಿ ರೋಹಿಮ್ ಎಂಬಾತನ ಜೊತೆ ಮುಸ್ಕಾನ್ ಳನ್ನು ವಿವಾಹಮಾಡಿ ಕೊಡಲಾಗಿತ್ತು. ಮದುವೆಯಾದ ಒಂದು ತಿಂಗಳವರೆಗೆ ಸಭ್ಯನಂತೆ ನಾಟಕವಾಡಿದ್ದ ರೋಹಿಮ್ ಬರಬರುತ್ತಾ ಪತ್ನಿಗೆ ತನ್ನ ಕರಾಳ ಮುಖ ತೋರಿಸಲು ಶುರುಮಾಡಿದ್ದ.

ನೃತ್ಯದೊಂದಿಗೆ ವಧುವನ್ನು ಮಂಟಪಕ್ಕೆ ಬರಮಾಡಿಕೊಂಡ ವರ

ಪ್ರತಿದಿನ ಗಾಂಜಾ ಸೇವಿಸಿ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಪತ್ನಿ ಗರ್ಭಿಣಿ ಎಂಬುದನ್ನೂ ನೋಡದೇ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಹಿಂಸಿಸುತ್ತಿದ್ದ. ಬರಬರುತ್ತಾ ಪತಿಯ ಟಾರ್ಚರ್ ತಾಳಲಾರದೇ ಮುಸ್ಕಾನ್ ನೇಣಿಗೆ ಕೊರಳೊಡ್ಡಿದ್ದಾಳೆ. ಮುಸ್ಕಾನ್ ಆತ್ಮಹತ್ಯೆ ಬೆನ್ನಲ್ಲೇ ಪತಿ ಮಹಾಶಯನ ಇನ್ನೊಂದು ರಹಸ್ಯ ಕೂಡ ಬಯಲಾಗಿದೆ.

ರೋಹಿಮ್ ಮುಸ್ಕಾನ್ ಳ ದೂರದ ಸಂಬಂಧಿ ಜೊತೆಯೇ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮುಸ್ಕಾನ್ ಪತಿಯನ್ನು ಪ್ರಶ್ನಿಸಿದ್ದಾಳೆ. ಇದೇ ಕಾರಣಕ್ಕೂ ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಮುಸ್ಕಾನ್ ಳ ಕುಟುಂಬದವರು ರೋಹಿಮ್ ವಿರುದ್ಧ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ದೂರು ದಾಖಲಿಸಿದ್ದು, ಆರೋಪಿ ರೋಹಿಮ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...