alex Certify BIG NEWS: ಅಭಿಮಾನಿಗಳಿಗಾಗಿ ಮಧ್ಯರಾತ್ರಿಯಿಂದಲೇ ʼಕೆಜಿಎಫ್‌ -2ʼ ಪ್ರದರ್ಶನ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಭಿಮಾನಿಗಳಿಗಾಗಿ ಮಧ್ಯರಾತ್ರಿಯಿಂದಲೇ ʼಕೆಜಿಎಫ್‌ -2ʼ ಪ್ರದರ್ಶನ ಆರಂಭ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ನೆಚ್ಚಿನ ನಟನ ಸಿನಿಮಾವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಕೆಜಿಎಫ್‌ – 2 ಪ್ರದರ್ಶನ ಆರಂಭಗೊಂಡಿದ್ದು, ಸಿನಿಮಾ ವೀಕ್ಷಿಸಿದ ನಂತರ ಅಭಿಮಾನಿಗಳು ಸಾರ್ಥಕತಾ ಭಾವ ವ್ಯಕ್ತಪಡಿಸಿದ್ದಾರೆ.

ವಿಶ್ವ ಚಿತ್ರರಂಗವನ್ನೇ ಕೆಜಿಎಫ್‌ – ಬೆರಗುಗೊಳಿಸಲಿದೆ ಎಂಬ ಅಭಿಪ್ರಾಯ ಚಿತ್ರ ವೀಕ್ಷಿಸಿದ ಎಲ್ಲರಿಂದಲೂ ವ್ಯಕ್ತವಾಗಿದ್ದು, ಯಾವ ಹಾಲಿವುಡ್‌ ಚಿತ್ರಗಳಿಗಿಂತಲೂ ಕೆಜಿಎಫ್‌ – ಕಡಿಮೆಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಮೆರಿಕಾ ಒಂದರಲ್ಲೇ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಂಡಿದ್ದು, ಅಲ್ಲೂ ಕೂಡಾ ತುಂಬಿದ ಗೃಹಗಳಲ್ಲಿ ಪ್ರದರ್ಶನವಾಗುತ್ತಿದೆ.

ಉತ್ತರ ಭಾರತದಲ್ಲೂ ಕೆಜಿಎಫ್‌ – 2 ಹವಾ ಎಬ್ಬಿಸಿದ್ದು, ಪ್ರೇಕ್ಷಕರು ಮುಗಿಬಿದ್ದು ಚಿತ್ರ ವೀಕ್ಷಿಸಿದ್ದಾರೆ. ಮೊದಲ ದಿನ 40 ಲಕ್ಷ ಟಿಕೆಟ್‌ ಗಳು ಈಗಾಗಲೇ ಸೋಲ್ಡ್‌ ಔಟ್‌ ಆಗಿದೆ ಎನ್ನಲಾಗಿದ್ದು, ಅಭಿಮಾನಿಗಳು ಟಿಕೆಟ್‌ ಖರೀದಿಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಕೆಜಿಎಫ್‌ – 2 ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಬಹುದು ಎಂಬ ಮಾತುಗಳು ಉದ್ಯಮದ ವಲಯದಲ್ಲಿ ಕೇಳಿ ಬರುತ್ತಿವೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರು ನಟಿಸಿದ್ದಾರೆ. ವಿಜಯ್ ಕಿರಂಗದೂರು ತಮ್ಮ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...