alex Certify BIG NEWS: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 66 ವರ್ಷದ ವೃದ್ಧನಿಗೆ 81 ವರ್ಷ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 66 ವರ್ಷದ ವೃದ್ಧನಿಗೆ 81 ವರ್ಷ ಜೈಲು

ಅಪ್ರಾಪ್ತೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ್ದ 66 ವರ್ಷದ ವೃದ್ಧನಿಗೆ ಕೇರಳದ ನ್ಯಾಯಾಲಯವೊಂದು ಬರೋಬ್ಬರಿ 81 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ತಿರುವನಂತಪುರಂನ ಕ್ಷಿಪ್ರ ವಿಚಾರಣೆ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪಿ.ಜಿ. ವರ್ಗೀಸ್ ಮಂಗಳವಾರದಂದು ಈ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಜೈಲು ಶಿಕ್ಷೆ ಜೊತೆಗೆ 2.2 ಲಕ್ಷ ರೂಪಾಯಿಗಳ ದಂಡವನ್ನು ಸಹ ವಿಧಿಸಲಾಗಿದೆ.

ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಸ್ತೃತ ವಿಚಾರಣೆ ನಡೆಸಿದ ನ್ಯಾಯಾಧೀಶರು ಅತ್ಯಾಚಾರಕ್ಕೆ 20 ವರ್ಷ, ಗರ್ಭವತಿಯನ್ನಾಗಿಸಿದ್ದಕ್ಕೆ 30 ವರ್ಷ, ಪೋಕ್ಸೋ ಕಾಯ್ದೆ ಅಡಿ 5 ವರ್ಷ ಹಾಗೂ ಇತರ ಸೆಕ್ಷನ್ ಗಳ ಅಡಿಯಲ್ಲಿ ಬಾಕಿ ಉಳಿದ ಕಾರಾಗೃಹ ಶಿಕ್ಷೆಯನ್ನು ವಿಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...